Select Your Language

Notifications

webdunia
webdunia
webdunia
webdunia

8 ತಿಂಗಳವರೆಗೆ ಪ್ರತಿ ರಾತ್ರಿ ಯುವತಿಯ ಮೇಲೆ ರೇಪ್ ಎಸಗಿದ ನಕಲಿ ದೇವಮಾನವ

8 ತಿಂಗಳವರೆಗೆ ಪ್ರತಿ ರಾತ್ರಿ ಯುವತಿಯ ಮೇಲೆ ರೇಪ್ ಎಸಗಿದ ನಕಲಿ ದೇವಮಾನವ
ಸೀತಾಪುರ್(ಉತ್ತರಪ್ರದೇಶ): , ಗುರುವಾರ, 28 ಸೆಪ್ಟಂಬರ್ 2017 (16:16 IST)
ಹದಿಹರೆಯದ ಯುವತಿಯ ಮೇಲೆ ಪದೇ ಪದೇ ಅತ್ಯಾಚಾರ ಮಾಡಿದ ಆರೋಪದ ಮೇಲೆ ಸ್ವಯಂಘೋಷಿತ ದೇವಮಾನವ ಸಿಯಾ ರಾಮ್‌ದಾಸ್‌ನನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ. 
ಯುವತಿಯ ಮೇಲೆ ಎಂಟು ತಿಂಗಳುಗಳವರೆಗೂ ನಕಲಿ ಸ್ವಯಂಘೋಷಿತ ದೇವಮಾನವ ದಾಸ್ ಪ್ರತಿ ರಾತ್ರಿ ಅತ್ಯಾಚಾರೆವಸಗಿದ್ದಾನೆ. ನಂತರ ಆತನ ಶಿಷ್ಯಂದಿರು ಕೂಡಾ ಅತ್ಯಾಚಾರವೆಸಗಿದ್ದಾರೆ ಎಂದು ಯುವತಿ ದೂರು ನೀಡಿದ್ದಾಳೆ.
 
ಸಂಬಂಧಿಕರು ಯುವತಿಯನ್ನು 50 ಸಾವಿರ ರೂಪಾಯಿಗಳಿಗಾಗಿ ಸಿಯಾ ರಾಮ್ ದಾಸ್‌ಗೆ ಮಾರಾಟ ಮಾಡಿದ್ದರು.ನಂತರ ಆಕೆಯನ್ನು ಲಕ್ನೋ ನಗರಕ್ಕೆ ಕರೆದುಕೊಂಡು ಹೋಗಲಾಯಿತು. ತದನಂತರ ಆಕೆಯನ್ನು ಬಾಬಾನ ಆಶ್ರಮವಾದ ಮಿಶ್ರಿಕಿ ಪಟ್ಟಣಕ್ಕೆ ಕರೆದುಕೊಂಡು ಹೋಗಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
 
ಯುವತಿಯ ಪ್ರಕಾರ ಆರೋಪಿ ಬಾಬಾ ಯುವತಿಯ ಎಂಎಂಎಸ್ ಮಾಡಿ ಯಾರಿಗಾದರೂ ಮಾಹಿತಿ ನೀಡಿದಲ್ಲಿ ಎಂಎಂಎಸ್ ಬಹಿರಂಗಪಡಿಸುವುದಾಗಿ ಬೆದರಿಕೆಯೊಡ್ಡಿದ್ದ. ನಂತರ ಆಗ್ರಾದಲ್ಲಿರುವ ಮತ್ತೊಂದು ಆಶ್ರಮಕ್ಕೆ ಕರೆದುಕೊಂಡು ಹೋದಾಗ ಅಲ್ಲಿದ್ದ ಬೇರೇ ಬೇರೆ ಪುರುಷರು ನಿರಂತರವಾಗಿ 8 ತಿಂಗಳುಗಳ ಕಾಲ ಅತ್ಯಾಚಾರವೆಸಗಿದ್ದಾರೆ.
 
ಯುವತಿ ಮತ್ತೆ ಮಿಶ್ರಿಕಿ ಆಶ್ರಮಕ್ಕೆ ಬಂದಾಗ ಬಾಬಾ ಮತ್ತೆ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಆದರೆ ಅದು ಹೇಗೋ ಆತನ ಮೊಬೈಲ್‌ ಕಸಿದುಕೊಂಡ ಯುವತಿ ಪೊಲೀಸರಿಗೆ ಕರೆ ಮಾಡಿದ್ದಾಳೆ
 
ಬಾಬಾ ಸಿಯಾ ರಾಮ್ ದಾಸ್ ಸಂಚಾಲಿತ ಶಾಲೆಯಲ್ಲಿರುವ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಶಾಲಾ ವಿದ್ಯಾರ್ಥಿನಿಯರು ಕೇವಲ ಅತ್ಯಾಚಾರಕ್ಕೆ ಒಳಗಾಗಲಿಲ್ಲ. ವಿದ್ಯಾರ್ಥಿನಿಯರನ್ನು ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಸರಬರಾಜು ಮಾಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.
 
ಸೀತಾಪುರ್ ಪೊಲೀಸರು ನಕಲಿ ದೇವಮಾನವ ಸಿಯಾ ರಾಮ್ ದಾಸ್ ವಿರುದ್ಧ ರೇಪ್ ಕೇಸ್ ದಾಖಲಿಸಿ ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಸ್ವಯಂ-ಘೋಷಿತ ದೇವಮಾನವ ಸಿಯಾ ರಾಮ್ ದಾಸ್, ಎಲ್ಲಾ ಆರೋಪಗಳನ್ನು ನಿರಾಕರಿಸಿ ಹಿಂದೆಂದೂ ಯುವತಿಯನ್ನೇ ಭೇಟಿ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ಸಿಎಂ ನಾನೇ ಎನ್ನುವ ಹೇಳಿಕೆಗೆ ಜಾಫರ್‌ಷರೀಫ್ ಆಕ್ಷೇಪ