ಈ ವೇಳೆ ಮಾತನಾಡಿದ ಅವರು, 1996ರಿಂದಲೇ ನನ್ನ ಹೆಸರು ರಾಜಕಾರಣದ ಜತೆ ಸೇರಿತ್ತು. 2017ರಲ್ಲಿ ನಾನು ರಾಜಕೀಯ ಪ್ರವೇಶದ ಬಗ್ಗೆ ಹೇಳಿದ್ದೆ. ರಾಜಕೀಯ ಪಕ್ಷಗಳು ಮತಕ್ಕಾಗಿ ಜನರ ಬಳಿ ಹೋಗುತ್ತವೆ. ಸರ್ಕಾರದ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುವುದಿಲ್ಲ. ತಮಿಳುನಾಡಿನಲ್ಲಿ 2 ದೊಡ್ಡ ಪಕ್ಷಗಳಿವೆ, ಈಗ ಈ ಪಕ್ಷಗಳನ್ನು ಜನ ತಿರಸ್ಕರಿಸಿದ್ದಾರೆ. ಈ ಪಕ್ಷಗಳಿಗೆ ಹೊಸ ನಾಯಕರು ಬಂದಿಲ್ಲ. ಜನರ ನಿರೀಕ್ಷೆಯಂತೆ ಆಡಳಿತ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ.
ಯುವಕರು ಮಹಿಳೆಯರಿಗೆ ಪಕ್ಷದಲ್ಲಿ ಆದ್ಯತೆ. ಬೇರೆ ಪಕ್ಷಗಳಲ್ಲಿಯೂ ನಾಯಕರಿದ್ದಾರೆ ಅಂಥವರಿಗೆ ಉತ್ತಮ ಅವಕಾಶ ಸಿಗುತ್ತಿಲ್ಲ. ರಾಜಕರಣದಲ್ಲಿ ಹೊಸ ರಕ್ತ ಬರಬೇಕಿದೆ. ಸರ್ಕಾರ, ಪಕ್ಷಕ್ಕೆ ಒಬ್ಬ ನಾಯಕ ಇರೋದು ಬೇಡ, ನನಗೆ ಸಿಎಂ ಆಗೋ ಬಯಕೆ ಇಲ್ಲ. ಸಿಎಂ ಹುದ್ದೆಗೆ ವಿದ್ಯಾವಂತನಾಗಿರಬೇಕು. ಯುವ ಆಡಳಿತಗಾರಬೇಕು. ಪಕ್ಷದ ಅಧ್ಯಕ್ಷ ಸರ್ಕಾರ ನಿಯಂತ್ರಿಸಬಾರದು, ಉತ್ತಮ ಪಕ್ಷ ಕಟ್ಟಲು ಸರಣಿ ಸಭೆ ನಡೆಸಿದ್ದೇನೆ. ಹಣವಂತರು ಬೇಡ, ಗುಣವಂತರು ಬೇಕು ಎಂದು ಅವರು ತಿಳಿಸಿದ್ದಾರೆ.