Publish Date: Thu, 12 Mar 2020 (10:15 IST)
Updated Date: Thu, 12 Mar 2020 (10:17 IST)
ಬೆಂಗಳೂರು : ಟಿಪ್ಪು ಜಯಂತಿ ರದ್ದು ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ನಿರ್ಧಾರದಿಂದ ಹಿಂದೆ ಸರಿಯಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ ಎಂಬುದಾಗಿ ತಿಳಿದುಬಂದಿದೆ.
ಈ ಬಗ್ಗೆ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ. ಟಿಪ್ಪು ಜಯಂತಿ ಆಚರಣೆ ಬಗ್ಗೆ ಸರ್ಕಾರದ ನಿಲುವು ತಿಳಿಸಲು ಹೈಕೋರ್ಟ್ ಸೂಚಿಸಿತ್ತು. ಹೀಗಾಗಿ ಟಿಪ್ಪು ಜಯಂತಿ ರದ್ಧತಿಗೆ ಪೂರಕ ದಾಖಲೆ ಸಂಗ್ರಹಸಿದ ರಾಜ್ಯಸರ್ಕಾರ ಇದೀಗ ದಾಖಲೆ ಸಂಗ್ರಹಿಸಿ ಹೈಕೋರ್ಟ್ ಗೆ ಸಲ್ಲಿಸಿದೆ ಎನ್ನಲಾಗಿದೆ.