Select Your Language

Notifications

webdunia
webdunia
webdunia
webdunia

ಭಾರತೀಯ ಸೇನೆಯನ್ನೇ ಮುಗಿಸುತ್ತೆ : ಪ್ರಿಯಾಂಕಾ ಗಾಂಧಿ

ಭಾರತೀಯ ಸೇನೆಯನ್ನೇ ಮುಗಿಸುತ್ತೆ : ಪ್ರಿಯಾಂಕಾ ಗಾಂಧಿ
ನವದೆಹಲಿ , ಭಾನುವಾರ, 19 ಜೂನ್ 2022 (13:20 IST)
ನವದೆಹಲಿ : ಕೇಂದ್ರ ಸರ್ಕಾರ ಜಾರಿಗೊಳಿಸಿರುವ `ಅಗ್ನಿಪಥ್’ ಯೋಜನೆಯು ಭಾರತೀಯ ಸೇನೆಯನ್ನು ನಾಶ ಮಾಡುತ್ತದೆ. ಯುವಕರನ್ನು ಕೊಲ್ಲುತ್ತದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಎಚ್ಚರಿಸಿದ್ದಾರೆ.

ಕಾಂಗ್ರೆಸ್ ಸತ್ಯಾಗ್ರಹವನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿಭಟನಾಕಾರರು ಯಾವುದೇ ಕಾರಣಕ್ಕೂ ತಮ್ಮ ಹೋರಾಟ ನಿಲ್ಲಿಸಬಾರದು. ತಮ್ಮ ಆಂದೋಲನವನ್ನು ಶಾಂತಿಯುತವಾಗಿ ಮುಂದುವರಿಸಬೇಕು, ಸರ್ಕಾರವನ್ನು ಪತನಗೊಳಿಸಬೇಕು ಎಂದು ಕರೆ ನಿಡಿದ್ದಾರೆ.

ಅಗ್ನಿಪಥ್ ಯೋಜನೆಯು ದೇಶದ ಯುವಕರನ್ನು ಕೊಲ್ಲುತ್ತದೆ, ಸೈನ್ಯವನ್ನು ಮುಗಿಸುತ್ತದೆ. ದಯವಿಟ್ಟು ಈ ಸರ್ಕಾರದ ಉದ್ದೇಶವನ್ನು ನೋಡಿ. ಪ್ರಜಾಸತ್ತಾತ್ಮಕ, ಶಾಂತಿಯುತ ಮತ್ತು ಅಹಿಂಸಾತ್ಮಕ ಮಾರ್ಗಗಳ ಮೂಲಕ ಸರ್ಕಾರವನ್ನು ಉರುಳಿಸಿ. ದೇಶದ ಆಸ್ತಿಯನ್ನು ರಕ್ಷಿಸುವ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಹೇಳಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾದ ತಿಂಗಳಲ್ಲೇ ಗರ್ಭಿಣಿ!