Publish Date: Sun, 13 Mar 2022 (13:23 IST)
Updated Date: Sun, 13 Mar 2022 (18:27 IST)
ಬೆಂಗಳೂರು : ಐದು ರಾಜ್ಯಗಳ ಚುನಾವಣಾ ಫಲಿತಾಂಶದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿದೆ.
ರಾಜ್ಯ ಬಿಜೆಪಿಯಲ್ಲೂ ಹೈಕಮಾಂಡ್ ಆಪರೇಷನ್ ಮಾಡುವ ಸಾಧ್ಯಗಳಿವೆ. ಬಿಜೆಪಿಯ 2 ಮಹಾ ಟೀಂಗಳು ರಾಜ್ಯಕ್ಕೆ ಆಗಮಿಸಿವೆ.
18 ಸದಸ್ಯರನ್ನೊಳಗೊಂಡ ಮೋದಿ-ಶಾ ಜೋಡಿ ನಿಷ್ಠರ 2 ತಂಡ ಈಗಾಗಲೇ ರಾಜ್ಯಕ್ಕೆ ಬಂದಿದ್ದು, ಈ ತಂಡದ ಎಂಟ್ರಿಯಿಂದ ಬಿಜೆಪಿಯಲ್ಲಿ ಕುತೂಹಲ ಮೂಡಿದೆ.
18 ಜನರನ್ನೊಳಗೊಂಡ ಬಿಜೆಪಿಯ 2 ತಂಡಗಳು ರಾಜ್ಯಕ್ಕೆ ಆಗಮಿಸಿವೆ. ಈ ತಂಡ ಶಾಸಕರು, ಮುಖಂಡರು, ಸಂಘದ ಪ್ರಮುಖರನ್ನು ಭೇಟಿ ಆಗಲಿದೆ.
ರಾಜ್ಯ ಸರ್ಕಾರದ ಕಾರ್ಯವೈಖರಿ ಏನು..? ಸರ್ಕಾರದಲ್ಲಿ ಯಾರು ಏನ್ ಮಾಡ್ತಿದ್ದಾರೆ..?, ಸಚಿವರ ಕಾರ್ಯ ನಿರ್ವಹಣೆ ಹೇಗಿದೆ..?, ಯಾವ ಇಲಾಖೆ ಮುಂದು..?, ಯಾವುದು ಹಿಂದೆ..?, ಸಚಿವರ ಸುತ್ತ ಇರುವ ಜನರ್ಯಾರು..? ಸಚಿವರ ಆಡಳಿತದ ಬಗ್ಗೆ ಜನರ ಅನಿಸಿಕೆ ಹೇಗಿದೆ..?, ಪಕ್ಷದ ಪದಾಧಿಕಾರಿಗಳು, ರಾಜ್ಯಾಧ್ಯಕ್ಷರ ಕಾರ್ಯವೈಖರಿ ಬಗ್ಗೆಯೂ ಮಾಹಿತಿ ಕಲೆ ಹಾಕಲಿದೆ.