Publish Date: Fri, 11 Mar 2022 (11:58 IST)
Updated Date: Fri, 11 Mar 2022 (12:03 IST)
ಇಂಫಾಲ್ : ಮಣಿಪುರದ ಮುಂದಿನ ಮುಖ್ಯಮಂತ್ರಿಯನ್ನು ಬಿಜೆಪಿ ಸಂಸದೀಯ ಮಂಡಳಿ ಮತ್ತು ರಾಜ್ಯ ಘಟಕವು ಒಂದಾಗಿ ನಿರ್ಧರಿಸುತ್ತದೆ ಎಂದು ಪಕ್ಷದ ರಾಜ್ಯಾಧ್ಯಕ್ಷೆ ಶಾರದಾ ದೇವಿ ಹೇಳಿದ್ದಾರೆ.
ರಾಜ್ಯಪಾಲರು ಸರ್ಕಾರ ರಚಿಸಲು ಆಹ್ವಾನಿಸಿದ ನಂತರ ಪಕ್ಷವು ಸಿದ್ಧವಾಗಲಿದೆ. 60 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ 32 ಸ್ಥಾನಗಳೊಂದಿಗೆ ಬಹುಮತದ ಗಡಿ ದಾಟಿದೆ ಎಂದಿದ್ದಾರೆ.
ಮಾಧ್ಯಮದವರು ರಾಜ್ಯದಲ್ಲಿ ಹೊಸ ಮುಖ್ಯಮಂತ್ರಿಯಾಗುತ್ತಾರೆಯೇ ಅಥವಾ ಎನ್.ಬಿರೇನ್ ಸಿಂಗ್ ಅವರು ಅಧಿಕಾರದಲ್ಲಿ ಮುಂದುವರಿಯುತ್ತಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಷ್ಟ್ರೀಯ ಪಕ್ಷವಾಗಿ ನಾವು ಸಂಸದೀಯ ಮಂಡಳಿಯನ್ನು ಹೊಂದಿದ್ದೇವೆ.
ಹಾಗಾಗಿ ರಾಜ್ಯ ಘಟಕದೊಂದಿಗೆ ಸಮಾಲೋಚಿಸಿ ಮುಂದಿನ ಮುಖ್ಯಮಂತ್ರಿ ಯಾರು ಎಂದು ನಿರ್ಧರಿಸುತ್ತೇವೆ ಎಂದು ತಿಳಿಸಿದ್ದಾರೆ.