Publish Date: Sun, 06 Dec 2020 (11:34 IST)
Updated Date: Sun, 06 Dec 2020 (11:36 IST)
ಗಂಡನೊಬ್ಬ ಕೊರೊನಾಕ್ಕೆ ಹೆದರಿ ತನ್ನ ಪತ್ನಿಯೊಂದಿಗೆ ಮಲಗದಿರುವ ಘಟನೆ ವರದಿಯಾಗಿದೆ.
ಆರು ತಿಂಗಳ ಹಿಂದೆ ಮದುವೆಯಾಗಿದ್ದ ವರ ತನ್ನ ಪತ್ನಿಯೊಂದಿಗೆ ಅಂತರ ಕಾಯ್ದುಕೊಂಡಿದ್ದು ಪತ್ನಿಗೆ ಅನುಮಾನ ಮೂಡಿಸಿತ್ತು.
ಪತ್ನಿಯ ಮನೆಮಂದಿಗೆ ಕೊರೊನಾ ಬಂದಿತ್ತು. ಹೀಗಾಗಿ ಪತ್ನಿಯಿಂದ ಪತಿ ಅಂತರ ಕಾಯ್ದುಕೊಂಡಿದ್ದನು.
ಆದರೆ ಪತಿಯ ಪುರುಷತ್ವದ ಮೇಲೆ ಅನುಮಾನಗೊಂಡ ಪತ್ನಿ ತನ್ನ ತವರು ಮನೆ ಸೇರಿದ್ದಳು.
ಪತಿ ತನ್ನ ಪುರುಷತ್ವ ಪರೀಕ್ಷೆಯ ವರದಿ ಸಾಬೀತು ಪಡಿಸಿದ ಬಳಿಕವಷ್ಟೇ ಪತ್ನಿ ಗಂಡನೊಂದಿಗೆ ಇರಲು ಒಪ್ಪಿಕೊಂಡಿದ್ದಾಳೆ. ಅಂದ್ಹಾಗೆ ಮಧ್ಯಪ್ರದೇಶದಲ್ಲಿ ಈ ಘಟನೆ ನಡೆದಿದೆ.