ತಿರುವನಂತಪುರಂ: ಪತ್ನಿ ಶೀಲ ಶಂಕಿಸಿ ಪತಿಯೇ ಆಕೆಯನ್ನು ಕೊಲೆ ಮಾಡಿದ ಘಟನೆ ಕೇರಳದಲ್ಲಿ ನಡೆದಿದೆ.
25 ವರ್ಷದ ಮಹಿಳೆ ಗಂಡನಿಂದ ಕೊಲೆಗೀಡಾಗಿದ್ದಾಳೆ. ಜುಲೈನಲ್ಲಷ್ಟೇ ಇಬ್ಬರ ವಿವಾಹವಾಗಿತ್ತು. ಆದರೆ ಗಂಡನಿಗೆ ಹೆಂಡತಿಯ ಶೀಲದ ಮೇಲೆಯೇ ಶಂಕೆ.
ಈ ಕಾರಣಕ್ಕೆ ಗಂಡ-ಹೆಂಡತಿ ನಡುವೆ ಜಗಳವಾಗಿತ್ತು. ಬಳಿಕ ಗಂಡ ಆಕೆಯ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿದ್ದಾನೆ. ಮಹಿಳೆಯ ಪೋಷಕರು ಮನೆಗೆ ಬಂದು ನೋಡಿದಾಗ ಆಕೆ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಳು. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.