Publish Date: Sat, 21 Jan 2023 (11:05 IST)
Updated Date: Sat, 21 Jan 2023 (11:06 IST)
ಪುಣೆ : ಗರ್ಭಿಣಿಯಾಗಲು ಮಹಿಳೆಯೊಬ್ಬಳಿಗೆ ಮಾನವನ ಮೂಳೆಯನ್ನು ತಿನ್ನುವಂತೆ ಆಕೆಯ ಪತಿ ಹಾಗೂ ಅತ್ತೆ ಒತ್ತಾಯಿಸಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಘಟನೆಯು ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದ್ದು, ಅತ್ತೆ ಹಾಗೂ ಪತಿ ಸೇರಿ ಮಹಿಳೆಗೆ ಮಕ್ಕಳಾಗುವಂತೆ ಮಾಟಗಾರರ ಸಲಹೆ ಮೇರೆಗೆ ಅನೇಕ ಮೂಢನಂಬಿಕೆಗಳನ್ನು ಆಚರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅತ್ತೆ, ಹಾಗೂ ಪತಿ ಅಮವಾಸ್ಯೆ ಬಂದರೆ ಮಹಿಳೆಗೆ ಮಕ್ಕಳಾಗಲು ಅನೇಕ ಮೂಢ ನಂಬಿಕೆಯ ಆಚರಣೆಗಳನ್ನು ಮಾಡಲು ಒತ್ತಾಯಿಸುತ್ತಿದ್ದರು.
ಅಷ್ಟೇ ಅಲ್ಲದೇ ಆಕೆಯಳೊಬ್ಬಳನ್ನೇ ರಾತ್ರಿ ಸ್ಮಶಾನಕ್ಕೆ ಕಳುಹಿಸುವುದು ಜೊತೆಗೆ ಸತ್ತ ಮಾನವರ ಮೂಳೆಗಳನ್ನು ತಿನ್ನಲು ಬಲವಂತ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಘಟನೆಗೆ ಸಂಬಂಧಿಸಿ ಮಹಿಳೆಯು ಪುಣೆ ಪೊಲೀಸರಿಗೆ ದೂರು ನೀಡಿದ್ದಾಳೆ. ಮಹಿಳೆ ನೀಡಿದ ದೂರಿನನ್ವಯ ಪತಿ, ಅತ್ತೆ ಹಾಗೂ ಮಾವ ಸೇರಿದಂತೆ 7 ಜನರ ವಿರುದ್ಧ ಮೂಢನಂಬಿಕೆ ವಿರೋಧಿ ಕಾಯ್ದೆಯಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.