ಕಿಟಕಿಯಿಂದ ಹಾರಿ ಪತ್ನಿ ಪರಾರಿ: ಗಂಡ ಏನ್ ಮಾಡ್ದ ಗೊತ್ತ!?

Webdunia
ಬುಧವಾರ, 29 ಡಿಸೆಂಬರ್ 2021 (16:43 IST)
ಕೊಲ್ಕತ್ತಾ : ಹೈದರಾಬಾದ್ನಲ್ಲಿ ಬಡಗಿಯಾಗಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯೊಬ್ಬನ ಹೆಂಡತಿ ತಮ್ಮ ಮಗನೊಂದಿಗೆ ಪಶ್ಚಿಮ ಬಂಗಾಳದಲ್ಲಿಯೇ ವಾಸವಾಗಿದ್ದಳು.

ಗಂಡ ದೂರದ ಊರಿನಲ್ಲಿದ್ದ ಕಾರಣ ಆಕೆ ಬೇರೊಬ್ಬನೊಂದಿಗೆ ಸಂಬಂಧವಿಟ್ಟುಕೊಂಡಿದ್ದಳು. ಆತನೇ ಆಕೆಗೆ ಮೊಬೈಲನ್ನು ತಂದುಕೊಟ್ಟಿದ್ದ. ಹೆಂಡತಿ ಮತ್ತು ಮಗನನ್ನು ನೋಡಲು ಊರಿಗೆ ಹೋಗಿದ್ದ ಆತನ ಜೊತೆ ಜಗಳವಾಡಿಕೊಂಡಿದ್ದ ಆಕೆ ರಾತ್ರಿ ಎಲ್ಲರೂ ಮಲಗಿದ್ದಾಗ ಮನೆಯ ಕಿಟಕಿಯನ್ನು ಹಾರಿ ಮಗುವಿನ ಜೊತೆ ಓಡಿಹೋಗಿದ್ದಾಳೆ.

ತನ್ನ ಹೆಂಡತಿ ಕಿಟಕಿ ಹಾರಿ ನ್ಯಾನೋ ಕಾರು ಹತ್ತಿ ಓಡಿಹೋಗಿದ್ದನ್ನು ನೋಡಿದ ಗಂಡ ಆಕೆಯ ಹಿಂದೆ ಓಡಲು ಪ್ರಯತ್ನಿಸಿದರೂ ಆಕೆ ಪರಾರಿಯಾಗಿದ್ದಳು. ಆಕೆಯನ್ನು ಎಲ್ಲ ಕಡೆ ಹುಡುಕಿದ ನಂತರ ಪೊಲೀಸರಿಗೆ ದೂರು ಕೊಟ್ಟರೂ ಆಕೆ ಮತ್ತು ಮಗುವನ್ನು ಹುಡುಕಲು ಸಾಧ್ಯವಾಗಿರಲಿಲ್ಲ.

ಹೆಂಡತಿ ಮತ್ತು ಮಗುವನ್ನು ಪತ್ತೆಹಚ್ಚಲು ವಿಫಲವಾದ ನಂತರ ಆತಂಕಕ್ಕೀಡಾದ ಪತಿ ತನ್ನ ಹೆಂಡತಿಯನ್ನು ಹುಡುಕಿಕೊಟ್ಟವರಿಗೆ 5,000 ರೂ. ಬಹುಮಾನ ನೀಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಆ ಮಹಿಳೆಯ ಗಂಡ ಕೆಲಸದ ನಿಮಿತ್ತ ಹೈದರಾಬಾದ್‌ನಲ್ಲಿದ್ದಾಗ ಆಕೆ ಬೇರೊಬ್ಬರೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದಳು. ಆತ ಮನೆಗೆ ಬಂದಾಗ ಆಕೆ ತನ್ನ ಮಗುವಿನೊಂದಿಗೆ ಕಿಟಕಿ ಒಡೆದು ಮನೆಯಿಂದ ಓಡಿ ಹೋಗಿದ್ದಾಳೆ.

ಈ ಘಟನೆ ಪಶ್ಚಿಮ ಬಂಗಾಳದ ಪಿಂಗ್ಲಾ ಗ್ರಾಮದಲ್ಲಿ ನಡೆದಿದೆ. ಆ ವ್ಯಕ್ತಿ ವೃತ್ತಿಯಲ್ಲಿ ಬಡಗಿಯಾಗಿದ್ದು, ಪತಿ ತನ್ನ ಹೆಂಡತಿ ಮತ್ತು ಮಗುವನ್ನು ಹುಡುಕಲು ವಿವಿಧ ಸ್ಥಳಗಳಿಗೆ ಅಲೆದಾಡಿದ್ದಾನೆ.

ಡಿಸೆಂಬರ್ 9ರಿಂದ ತಾಯಿ ಮತ್ತು ಮಗು ಕಾಣೆಯಾಗಿದೆ ಎಂದು ಪತಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು, ಡಿಸೆಂಬರ್ 9ರಿಂದ ನನ್ನ ಹೆಂಡತಿ ಮತ್ತು ಮಗು ಕಾಣೆಯಾಗಿದ್ದಾರೆ.

ಯಾರಾದರೂ ಅವರನ್ನು ನೋಡಿದವರು ದಯವಿಟ್ಟು ನನಗೆ ತಿಳಿಸಿ. ಅವರನ್ನು ಹುಡುಕಿಕೊಟ್ಟವರಿಗೆ 5,000 ರೂಪಾಯಿ ಬಹುಮಾನ ನೀಡುತ್ತೇನೆ ಎಂದು ಬರೆದುಕೊಂಡಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳಿಂದಲೂ ಅವರಿಗೆ ಯಾವುದೇ ನೆರವು ಸಿಕ್ಕಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಿಸ್ಟರ್ ಕ್ಲೀನ್, ಸ್ಮಶಾನ ಭೂಮಿ, ಕೆರೆ ಅಂಗಳವನ್ನು ತಮ್ಮ ಹೆಸರಿಗೆ ಮಾಡಿಕೊಂಡದ್ದು ಹೇಗೆ

ಆರೋಗ್ಯದಲ್ಲಿ ಏರುಪೇರು, ವಿಶ್ರಾಂತಿಯಲ್ಲಿರುವ ಸಿದ್ದರಾಮಯ್ಯರನ್ನು ಭೇಟಿಯಾದ ಪುತ್ರ ಯತೀಂದ್ರ

ಎಐ ದುರ್ಬಳಕೆ ಬಗ್ಗೆ ಶ್ರೀಲೀಲಾ ಗರಂ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ನಟಿ

ಗೋವಾ ನೈಟ್‌ಕ್ಲಬ್ ದುರಂತ, ಪರಾರಿಯಾಗಿದ್ದ ಮಾಲಕ ಸಹೋದರರ ವಿಚಾರಣೆ

ಖಾಕಿ ಮೇಲೆ ಕೈ ಹಾಕಿದ ಮೂವರು ಮೂವರಿಗೆ 7 ವರ್ಷ ಜೈಲೇ ಗತಿ

ಮುಂದಿನ ಸುದ್ದಿ
Show comments