ಪಟಿಯಾಲ : ಖರ್ಚು ಮಾಡಲು ಎಟಿಎಂ ಕಾರ್ಡ್ ನೀಡದ ಪತ್ನಿಗೆ ಪತಿ ಮತ್ತು ಮೂವರು ಸೇರಿ ಥಳಿಸಿದ ಘಟನೆ ಸದರ್ ನಾಭಾ ನಿಲ್ದಾಣದ ವ್ಯಾಪ್ತಿಯಲ್ಲಿ ನಡೆದಿದೆ.
ಸಂತ್ರಸ್ತ ಮಹಿಳೆ ಪಂಜಾಬ್ ನಲ್ಲಿ ಪೊಲೀಸ್ ಅಧಿಕಾರಿ ಕೆಲಸ ಮಾಡುತ್ತಿದ್ದಳು. ಹಾಗೂ ಆಕೆಯ ಪತಿ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಆರೋಪಿ ಪತಿ ತನಗೆ ಖರ್ಚು ಮಾಡಲು ಹಣ ಬೇಕು ಎಂದು ಪತ್ನಿಯ ಬಳಿ ಎಟಿಎಂ ಕಾರ್ಡ್ ಕೇಳಿದ್ದಾನೆ. ಇದಕ್ಕೆ ಪತ್ನಿ ಅನಾವಶ್ಯಕ ಖರ್ಚು ಮಾಡುವುದು ಬೇಡ ಎಂದು ಎಟಿಎಂ ಕಾರ್ಡ್ ನೀಡಲು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಆತ ಮತ್ತು ಆತನ ಮೂವರು ಸಂಬಂಧಿಕರು ಮಹಿಳೆಗೆ ಚೆನ್ನಾಗಿ ಥಳಿಸಿದ್ದಾರೆ.
ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ ಎನ್ನಲಾಗಿದೆ.