ಆಂಡಿ‌ ಬೈರನ್ ಜತೆಗಿನ ಲವ್ ಆಪೇರ್‌ ವೈರಲ್ ಬೆನ್ನಲ್ಲೇ ಕ್ರಿಸ್ಟಿನ್ ಗೆ ಬಿಗ್ ಶಾಕ್‌ಕೊಟ್ಟ ಪತಿ ಆಂಡ್ರ್ಯೂ

Sampriya
ಭಾನುವಾರ, 7 ಸೆಪ್ಟಂಬರ್ 2025 (12:54 IST)
Photo Courtesy X
ನವದೆಹಲಿ: ಕೋಲ್ಡ್‌ಪ್ಲೇ ಸಂಗೀತ ಕಚೇರಿಯಲ್ಲಿ ತನ್ನ ಆಗಿನ ಬಾಸ್ ಆಂಡಿ ಬೈರನ್‌ ಜೊತೆಗಿನ ಆತ್ಮೀಯ ಕ್ಷಣದ ವೀಡಿಯೊ ವ್ಯಾಪಕವಾಗಿ ವೈರಲ್ ಬೆನ್ನಲ್ಲೇ ಕ್ರಿಸ್ಟಿನ್ ಕ್ಯಾಬಟ್ ದಾಂಪತ್ಯದಲ್ಲಿ‌ ಬಿರುಕು‌ ಮೂಡಿದೆ.

ಕೋಲ್ಡ್‌ಪ್ಲೇ ಸಂಗೀತ ಕಚೇರಿಯಲ್ಲಿ ತನ್ನ ಆಗಿನ ಬಾಸ್ ಆಂಡಿ ಬೈರನ್‌ ಜತೆಗೆ ಸಾಫ್ಟ್‌ವೇರ್ ಕಂಪನಿ ಆಸ್ಟ್ರೋನೊಮರ್‌ನ ಮಾಜಿ ಮಾನವ ಸಂಪನ್ಮೂಲ ಅಧಿಕಾರಿ ಕ್ರಿಸ್ಟಿನ್ ಕ್ಯಾಬಟ್ ಅಪ್ಪುಗೆಯ ಕ್ಷಣ ಸಾಮಾಜಿಕ ಜಾಲತಾಣದಲ್ಲಿ ಹೊಸ ಸಂಚಲನ‌ ಮೂಡಿಸಿತು. 

ಈ ವಿಡಿಯೋ ವ್ಯಾಪಕ  ಪ್ರಸಾರವಾದ ವಾರಗಳ ನಂತರ, ತನ್ನ ಪತಿ ಆಂಡ್ರ್ಯೂ ಕ್ಯಾಬಟ್‌ನಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಸಂಗೀತ ಕಾರ್ಯಕ್ರಮದ ಕ್ಷಣದ ಕ್ಲಿಪ್ ತ್ವರಿತವಾಗಿ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಊಹಾಪೋಹಗಳ ಅಲೆಯನ್ನು ಹುಟ್ಟುಹಾಕಿತು. ಆನ್‌ಲೈನ್ ಬಳಕೆದಾರರು ಈ ಜೋಡಿಯನ್ನು ಆಂಡಿ ಬೈರನ್ ಮತ್ತು ಕ್ರಿಸ್ಟಿನ್ ಕ್ಯಾಬಟ್ ಎಂದು ಗುರುತಿಸಿದ್ದಾರೆ. ಬೈರನ್ ಮಾರ್ಕೆಟಿಂಗ್ ಕಾರ್ಯನಿರ್ವಾಹಕ ಮೇಗನ್ ಕೆರ್ರಿಗನ್ ಅವರನ್ನು ವಿವಾಹವಾದರೆ, ಕ್ರಿಸ್ಟಿನ್ ಆಂಡ್ರ್ಯೂ ಕ್ಯಾಬಟ್ ಅವರನ್ನು ವಿವಾಹವಾಗಿದ್ದರು. ಆತ್ಮೀಯ ಕ್ಷಣದ ವಿಡಿಯೋ ವೈರಲ್‌ ಬೆನ್ನಲೇ ಕ್ರಿಸ್ಟಿನ್ ಹಾಗೂ ಕ್ಯಾಬಟ್ ದಾಂಪತ್ಯದಲ್ಲಿ ಬಿರುಕು ಮೂಡಿದೆ.

ಜುಲೈನಲ್ಲಿ ಮ್ಯಾಸಚೂಸೆಟ್ಸ್‌ನ ಜಿಲೆಟ್ ಕ್ರೀಡಾಂಗಣದಲ್ಲಿ ಚಿತ್ರೀಕರಿಸಲಾದ ಈ ವೀಡಿಯೊ, ಕ್ರೀಡಾಂಗಣದ ಕಿಸ್ ಕ್ಯಾಮ್‌ನಲ್ಲಿ ಇಬ್ಬರು ಅಪ್ಪುಗೆಯಿಂದ ರೋಮ್ಯಾಂಟಿಕ್ ಆಗಿ‌ ಸಮಯ ಕಳೆಯುತ್ತಿದ್ದರು.  

ಕ್ರಿಸ್ಟಿನ್ ಕ್ಯಾಬಟ್ ಆಗಸ್ಟ್ 13 ರಂದು ನ್ಯೂ ಹ್ಯಾಂಪ್‌ಶೈರ್‌ನ ಪೋರ್ಟ್ಸ್‌ಮೌತ್‌ನಲ್ಲಿರುವ ನ್ಯಾಯಾಲಯದಲ್ಲಿ ವಿಚ್ಛೇದನ ಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ವರದಿ ಮಾಡಿದೆ. 

ಕುಟುಂಬ ನಡೆಸುವ ವ್ಯವಹಾರ ಪ್ರೈವೇಟಿಯರ್ ರಮ್‌ನ ಸಿಇಒ ಆಗಿ ಸೇವೆ ಸಲ್ಲಿಸುತ್ತಿರುವ ಆಂಡ್ರ್ಯೂ ಕ್ಯಾಬಟ್‌ಗೆ ಇದು ಮೂರನೇ ವಿಚ್ಛೇದನವಾಗಲಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut Price: ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್, ಇಂದು ಬಂಪರ್ ಬೆಲೆ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಈ ಒಂದು ಕಾರಣಕ್ಕೆ ಸಿದ್ದರಾಮಯ್ಯ ಮೇಲೆ ರಾಹುಲ್ ಗಾಂಧಿಗೆ ಹೆಚ್ಚು ಒಲವು

ಪ್ರಿಯಕರನ ಜೊತೆ ಸೇರಿ ಗಂಡನ ಕೊಂದು ಡ್ರಮ್ ನಲ್ಲಿರಿಸಿದ್ದ ಮುಸ್ಕಾನ್ ಕತೆ ಏನಾಗಿದೆ ನೋಡಿ

ಯಡಿಯೂರಪ್ಪ ಅಂದೇ ಡಿಕೆ ಶಿವಕುಮಾರ್ ಭವಿಷ್ಯ ನುಡಿದಿದ್ದರು

ಮುಂದಿನ ಸುದ್ದಿ
Show comments