Select Your Language

Notifications

webdunia
webdunia
webdunia
webdunia

ಭಾರಿ ಮೊತ್ತದ ಪರಿಹಾರ: ಗ್ರಾಮದಲ್ಲಿರುವವರೆಲ್ಲ ಕರೋಡ್‌ಪತಿಗಳು

ಭಾರಿ ಮೊತ್ತದ ಪರಿಹಾರ: ಗ್ರಾಮದಲ್ಲಿರುವವರೆಲ್ಲ ಕರೋಡ್‌ಪತಿಗಳು
gujarat , ಸೋಮವಾರ, 11 ಡಿಸೆಂಬರ್ 2023 (12:29 IST)
ಕಳೆದ ಕೆಲ ದಿನಗಳ ಹಿಂದೆ ಖೋರಾಜ್ ಗ್ರಾಮದಲ್ಲಿ ಗುಜರಾತ್ ಕೈಗಾರಿಕಾ ಅಭಿವೃದ್ಧಿ ನಿಗಮ ಗ್ರಾಮಸ್ಥರಿಗೆ ಭೂಮಿ ಪರಿಹಾರವಾಗಿ 150 ಕೋಟಿ ರೂಪಾಯಿಗಳ ಚೆಕ್ ವಿತರಿಸಿದೆ. ಗ್ರಾಮದಲ್ಲಿರುವ ಹೆಚ್ಚಿನ ಭೂಮಿ ಮಹಿಳೆಯರ ಹೆಸರಿನಲ್ಲಿರುವುದರಿಂದ 1 ಕೋಟಿ ರೂಪಾಯಿಗಳಿಂದ 6 ಕೋಟಿ ರೂಪಾಯಿಗಳವರೆಗೆ ಪರಿಹಾರ ಪಡೆದಿದ್ದಾರೆ.
 
ಗುಜರಾತ್‌ನ ಕೈಗಾರಿಕೋದ್ಯಮ ನಿಗಮ ಭೂಸ್ವಾಧಿನಕ್ಕಾಗಿ ನೀಡಿದ ಭಾರಿ ಮೊತ್ತದ ಪರಿಹಾರ ರಾತ್ರೋರಾತ್ರಿ ಇವರನ್ನು ಕೋಟ್ಯಾಧಿಪತಿಗಳನ್ನಾಗಿಸಿದೆ. ಇವರಲ್ಲಿ 117 ಮಹಿಳೆಯರಿದ್ದಾರೆ.
 
ಗುಜರಾತ್‌ನ ಸನಂದಾ ಬಳಿಯ ಖೋರಾಜ್‌ ಗ್ರಾಮವೊಂದರಲ್ಲಿ 117 ಮಹಿಳೆಯರು ಕೋಟ್ಯಾಧಿಪತಿಗಳಿದ್ದಾರೆ ಎಂದರೆ ಯಾರು ನಂಬುವುದಿಲ್ಲ ಅಲ್ಲವಾ? ಇದು ಸತ್ಯ.
 
ಗ್ರಾಮದ ಕಲ್ಯಾಣಿ ಜಾಧವ್ (32)ಎನ್ನುವ ಮಹಿಳೆ 1.85 ಕೋಟಿ ರೂಪಾಯಿಗಳ ಪರಿಹಾರ ಚೆಕ್ ಪಡೆದಿದ್ದಾರೆ. ಆಕೆಯ ತಾಯಿ ಲೀಲಾ(56) 2.43 ಕೋಟಿ ರೂಪಾಯಿಗಳ ಚೆಕ್ ಪಡೆದಿದ್ದಾರೆ. ತಂದೆ ರಾಮಸಿಂಗ್ 3.5 ಕೋಟಿ ರೂಪಾಯಿಗಳ ಚೆಕ್ ಪಡೆದಿದ್ದಾರೆ.
 
ಕೃಷಿ ಉದ್ಯಮವನ್ನು ಆರಂಭಿಸಲು ಪರಿಹಾರದ ಹಣವನ್ನು ಬಳಸಿಕೊಳ್ಳುವಂತೆ ತಂದೆ ರಾಮಸಿಂಗ್ ಮುಕ್ತ ಪ್ರೋತ್ಸಾಹ ನೀಡಿದ್ದಾರೆ ಎಂದು ಕಲ್ಯಾಣಿ ಜಾಧವ್ ಸಂತಸ ವ್ಯಕ್ತಪಡಿಸಿದ್ದಾರೆ.
 
ಹಣವನ್ನು ಹೂಡಿಕೆ ಮಾಡಲು ಪತಿ ರಾಮಸಿಂಗ್ ಅವರೊಂದಿಗೆ ಸ್ಥಳವನ್ನು ಗುರುತಿಸಲಾಗಿದ್ದು, ಮುಂದಿನ ಪೀಳಿಗೆಗಾಗಿ ಹಣವನ್ನು ಸುರಕ್ಷಿತವಾಗಿಡುವುದು ಕೂಡಾ ಅಗತ್ಯವಾಗಿದೆ. ಹಣವನ್ನು ಖರ್ಚು ಮಾಡುವುದು ಸುಲಭ. ಆದರೆ, ಸಂಪಾದಿಸುವುದು ಕಷ್ಟವಾಗಿದೆ. ಹಣವನ್ನು ಎಚ್ಚರಿಕೆಯಿಂದ ಹೂಡಿಕೆ ಮಾಡುವುದು ಅಗತ್ಯವಾಗಿದೆ ಎಂದು ತಾಯಿ ಲೀಲಾ ಹೇಳಿದ್ದಾರೆ.
 
ಮತ್ತೊಬ್ಬ ವಿಧುವಾ ಮಹಿಳೆ ಜೋತ್ಸಾನಾ ಚಾವ್ಡಾ(45)ಗೆ ಎರಡು ಮಕ್ಕಳಿದ್ದು ಭೂಮಿ ಪರಿಹಾರವಾಗಿ 1.21 ಕೋಟಿ ರೂಪಾಯಿಗಳ ಪರಿಹಾರ ಪಡೆದಿದ್ದಾರೆ.ನನ್ನ ಮಗನಿಗೆ ಸುವಿ ಕಾರು ಖರೀದಿಸುವುದು ತುಂಬಾ ಇಷ್ಟ. ಆದರೆ, ನಾನು ಎಚ್ಚರಿಕೆಯಿಂದ ಹೂಡಿಕೆ ಮಾಡಿ ಮಕ್ಕಳ ಭವಿಷ್ಯವನ್ನು ರೂಪಿಸುತ್ತೇನೆ. ಭೂಮಿ ಪರಿಹಾರದಿಂದ ಬಂದ ಹಣ ನನ್ನ ಜವಾಬ್ದಾರಿಗಳನ್ನು ಈಡೇರಿಸಲು ನೆರವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
 
ಈಗಾಗಲೇ 15 ಮಹಿಳೆಯರು 1 ಕೋಟಿ ರೂಪಾಯಿಗಳಷ್ಟು ಹಣವನ್ನು ಸ್ಥಿರ ಠೇವಣಿಯಲ್ಲಿರಿಸಿದ್ದಾರೆ.ಸೆಜಾಲ್ ಮೋದಿ ಎನ್ನುವ ಮಹಿಳೆಗೆ 2.31 ಕೋಟಿ ರೂಪಾಯಿಗಳ ಪರಿಹಾರ ಬಂದಿದ್ದು,ಗ್ರಾಮದಲ್ಲಿ ಸಮುದಾಯ ಭವನ ಮತ್ತು ರಸ್ತೆ ನಿರ್ಮಾಣಕ್ಕೆ ಉಪಯೋಗಿಸುವುದಾಗಿ ಹೇಳಿ ಜನಪರ ಕಾಳಜಿ ಮೆರೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೋನಿಯಾ, ರಾಹುಲ್ ವಿರುದ್ಧ ಕೆಂಡಕಾರಿದ ರಾಮದೇವ್