ನವದೆಹಲಿ: ದೇಶದ ಪ್ರತಿಯೊಬ್ಬ ನಾಗರಿಕನ ಗುರುತಿನ ಚೀಟಿಯಾದ ಆಧಾರ್ ಕಾರ್ಡ್ ಮೂಲಕವೂ ನೀವು ಸಾಲ ಪಡೆಯಬಹುದು. ಹೇಗೆ ಇಲ್ಲಿದೆ ವಿವರ.
ಭಾರತದ ಪ್ರತಿಯೊಬ್ಬ ಪ್ರಜೆಗಳಿಗೂ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಎಲ್ಲಾ ರೀತಿಯ ಸರ್ಕಾರೀ ಯೋಜನೆಗಳು, ಕೆಲಸಗಳ ಪ್ರಯೋಜನ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಅದೇ ರೀತಿ ಬ್ಯಾಂಕಿಂಗ್ ಕೆಲಸಗಳಿಗೂ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ.
ಇದೀಗ ಅನೇಕ ಬ್ಯಾಂಕ್ ಗಳು ಮತ್ತು ಫೈನಾನ್ಸ್ ಕಂಪನಿಗಳು ಆಧಾರ್ ಕಾರ್ಡ್ ಮೂಲಕ ಡಿಜಿಟಲ್ ವೈಯಕ್ತಿಕ ಸಾಲ ಸೌಲಭ್ಯವನ್ನು ಒದಗಿಸುತ್ತಿವೆ. ಆನ್ ಲೈನ್ ಮೂಲಕವೇ ಆಧಾರ್ ಕಾರ್ಡ್ ಮೂಲಕ ಸಾಲ ಪಡೆಯಬಹುದಾಗಿದೆ. ಹೇಗೆ ಇಲ್ಲಿದೆ ವಿಧಾನ.
ಸಣ್ಣ ಮೊತ್ತದ ಸಾಲ ಪಡೆಯಬಹುದು
ಆಧಾರ್ ಕಾರ್ಡ್ ಇದ್ದರೆ 5,000 ರೂ. ನಿಂದ 10,000 ರೂ.ವರೆಗಿನ ಸಣ್ಣ ಮೊತ್ತದ ಸಾಲ ಪಡೆಯಬಹುದು. ಸಾಲ ನೀಡುವಾಗ ಆಧಾರ್ ಕಾರ್ಡ್ ಮತ್ತು ನಿಮ್ಮ ಪ್ಯಾನ್ ವಿವರವನ್ನು ಕೇಳಬಹುದು. ಅದರ ಹೊರತಾಗಿ ಇದಕ್ಕೆ ಹೆಚ್ಚಿನ ದಾಖಲೆಗಳು ಬೇಕಾಗಿಲ್ಲ.
ಯಾರು ಅರ್ಜಿ ಸಲ್ಲಿಸಬಹುದು?
ನೀವು ಯಾವುದಾದರೂ ಸಂಬಳ ಪಡೆಯುವ ಅಥವಾ ಸ್ವಯಂ ಉದ್ಯೋಗಿಯಾಗಿದ್ದರೂ ಅರ್ಜಿ ಸಲ್ಲಿಸಬಹುದು. ಬ್ಯಾಂಕ್ ಗಳು, ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು, ಫಿನ್ ಟೆಕ್ ಫ್ಲಾಟ್ ಫಾರ್ಮ್ ಗಳು ಸೇರಿದಂತೆ ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಆಧಾರ್ ಬಳಸಿ ಆನ್ ಲೈನ್ ಮೂಲಕವೇ 50,000 ರೂ.ವರೆಗೂ ಸಾಲ ಪಡೆಯಬಹುದಾಗಿದೆ.
ಅದರಲ್ಲೂ ಬ್ಯಾಂಕ್ ಗಳಲ್ಲಾದರೆ ನಿಮ್ಮ ಸಾಲ ವಿಶ್ವಾಸಾರ್ಹವಾಗಿರುತ್ತದೆ. ಸಾಲವನ್ನು ಸರಿಯಾದ ಸಮಯಕ್ಕೆ ಪಾವತಿ ಮಾಡಿದರೆ ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಾಗುತ್ತದೆ. ಕಡಿಮೆ ಬಡ್ಡಿದರವಿರುವ ಆಯ್ಕೆಗಳನ್ನು ನೋಡಿಕೊಂಡು ಸಾಲ ಪಡೆಯಿರಿ. ಆದರೆ ಆನ್ ಲೈನ್ ವಂಚನೆಗಳ ಬಗ್ಗೆ ಎಚ್ಚರಿಕೆಯಿಂದಿರುವುದು ಅಗತ್ಯ.