Select Your Language

Notifications

webdunia
webdunia
webdunia
webdunia

ಆರ್ಟಿಕಲ್ 370 ರದ್ದತಿ ನಂತರ ಕಾಶ್ಮೀರದಲ್ಲಿ ಮೊದಲ ಈದ್ ಹೇಗಿದೆ ಗೊತ್ತಾ?

ಆರ್ಟಿಕಲ್ 370 ರದ್ದತಿ ನಂತರ ಕಾಶ್ಮೀರದಲ್ಲಿ ಮೊದಲ ಈದ್ ಹೇಗಿದೆ ಗೊತ್ತಾ?
ನವದೆಹಲಿ , ಸೋಮವಾರ, 12 ಆಗಸ್ಟ್ 2019 (11:38 IST)
ನವದೆಹಲಿ: ಆರ್ಟಿಕಲ್ 370 ರದ್ದು ಮಾಡಿದ ಮೇಲೆ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಆಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕಾಶ್ಮೀರದ ಸ್ಥಿತಿ ಗತಿ ಹೇಗಿದೆ ಗೊತ್ತಾ?

 

ಒಂದು ಕಡೆ ಕರ್ಫ್ಯೂ. ಇನ್ನೊಂದು ಕಡೆ ಹಬ್ಬ. ಇವೆರಡರ ನಡುವೆ ಕಾಶ್ಮೀರದಲ್ಲಿ ಬಿಗು ಭದ್ರತೆಯ ನಡುವೆಯೇ ಸ್ಥಳೀಯರು ಹಬ್ಬದ ಆಚರಣೆ ಮಾಡಿದ್ದಾರೆ.

ಈದ್ ಆಚರಣೆ ಪ್ರಯುಕ್ತ ಕೆಲವು ಗಂಟೆಗಳ ಕಾಲ ಕರ್ಫ್ಯೂ ಸಡಿಲಗೊಳಿಸಲಾಗಿತ್ತು. ಹೆಚ್ಚಿನ ಹಿಂಸಾಚಾರವಾದ ಬಗ್ಗೆ ಯಾವುದೇ ವರದಿಯಾಗಿಲ್ಲ. ಈದ್ ಪ್ರಾರ್ಥನೆ ಮುಗಿದ ಬಳಿಕ ಮತ್ತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆ ಬಿಗಿಗೊಳಿಸಲಾಗಿದೆ.

ಈ ನಡುವೆ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಕಾಶ್ಮೀರದಲ್ಲಿ ಹಿಂದೂ ಧರ್ಮದವರು ಬಹುಸಂಖ್ಯೆಯಲ್ಲಿಲ್ಲದ ಕಾರಣಕ್ಕೇ ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನೊಂದೆಡೆ ಬಿಜೆಪಿ ನಾಯಕ ಶಿವರಾಜ್ ಸಿಂಗ್ ಚೌಹಾಣ್ ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದು, ಕಾಶ್ಮೀರದಲ್ಲಿ ಶಾಂತಿ ಇರುವುದನ್ನು ನೋಡಿ ಕಾಂಗ್ರೆಸ್ ಚಡಪಡಿಸುತ್ತಿದೆ ಎಂದು ಲೇವಡಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ ಸಿಎಂ ಯಡಿಯೂರಪ್ಪ