Select Your Language

Notifications

webdunia
webdunia
webdunia
webdunia

ಡ್ಯಾನ್ಸರ್ ಆಕಾಂಕ್ಷಿ ಯುವಕ ದೆಹಲಿ ದಾಳಿಯ ಸೂತ್ರಧಾರ ಹೇಗಾದ?

dancer
ನವದೆಹಲಿ: , ಗುರುವಾರ, 5 ಮೇ 2016 (15:21 IST)
ವಿಧಿಯು ಅವನ ಜೀವನದಲ್ಲಿ ನಿರ್ಣಾಯಕ ತಿರುವು ನೀಡಿರದಿದ್ದರೆ  ಹಿಂಡನ್ ವಾಯುನೆಲೆ ಮೇಲಿನ ದಾಳಿಯಲ್ಲಿ ವಿಫಲಗೊಂಡ ಜೈಷ್ ಎ ಮೊಹಮ್ಮದ್ ಭಯೋತ್ಪಾದಕ ದಾಳಿಯ ಮುಖ್ಯಶಂಕಿತ ಸಾಜಿದ್ ಡ್ಯಾನ್ಸರ್‌ ಆಗಿ ಜೀವನ ಸಾಗಿಸುತ್ತಿದ್ದ. ಸುಮಾರು 20 ವರ್ಷಗಳ ಹಿಂದೆ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಆಡಿಷನ್ ನೀಡಿದ್ದ ಸಾಜಿದ್ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದ. ಅವನ ನೃತ್ಯದ ಭಂಗಿಗಳನ್ನು ಪಾರ್ಕ್‍ವೊಂದರಲ್ಲಿ ಅಭ್ಯಾಸ ಮಾಡುವಾಗ ಮೌಲಾನಾ ಸಂಧಿಸಿದ್ದ.
 
 ಧಾರ್ಮಿಕ ಗುರು ಸಂಗೀತವನ್ನು ನಿಲ್ಲಿಸಿ ಯುವಕ ತನ್ನ ಜೀವನ ವ್ಯರ್ಥ ಮಾಡುತ್ತಿದ್ದಾನೆಂದು ಟೀಕಿಸಿದ. ಸಂಗೀತ ಮತ್ತು ನೃತ್ಯದ ಜೀವನವು ನಿನ್ನನ್ನು ನರಕದಲ್ಲಿ ದೂಡುತ್ತದೆಂದು ಬೆದರಿಸಿದ.  ಸಾಜಿದ್‌ನನ್ನು ಬಂಧಿಸಿದ ತನಿಖೆದಾರರಿಗೆ ಅವನು ಮಂಗಳವಾರ ರಾತ್ರಿ ಬಾಯಿಬಿಟ್ಟಿದ್ದಾನೆ. ನನಗೆ ನೃತ್ಯದಲ್ಲೇ ದೊಡ್ಡ ಹೆಸರು ಮಾಡಬೇಕೆಂಬ ಅಭಿಲಾಷೆಯಿತ್ತು. ಆದರೆ ನನ್ನ ಜೀವನದ ನಿಜವಾದ ಉದ್ದೇಶವನ್ನು ಶೋಧಿಸುವಂತೆ ಅವನು ತಿಳಿಸಿ ಅದು ನಿನ್ನನ್ನು ಸ್ವರ್ಗಕ್ಕೆ ಒಯ್ಯುತ್ತದೆಂದು ಹೇಳಿದ್ದ. 
 
 ಮೌಲಾನಾ ಮತ್ತು ಸಾಜೀದ್ ಜತೆ ಕೆಲವು ಭೇಟಿಗಳ ಬಳಿಕ ಸಾಜಿದ್ ಸೈಬರ್ ಕೆಫೆಗಳಿಗೆ ಭೇಟಿ ನೀಡಿ ರಂಗೂನರ್.ಕಾಂ ಸೈಟಿಗೆ ಜೋತುಬಿದ್ದ. ಈ ಜಾಲತಾಣದ ಪ್ರಚೋದನಾಕಾರಿ ಅಂಶಗಳು ಕುರಾನ್ ಬಹುಭಾಗವು ಧರ್ಮ ರಕ್ಷಣೆಗಾಗಿ ಜನರನ್ನು ಕೊಲ್ಲಬೇಕೆಂದು ಬೋಧಿಸುತ್ತದೆಂದು ನಂಬುವಂತೆ ಮಾಡಿದವು. ಕೆಲವೇ ತಿಂಗಳಲ್ಲಿ ಸಾಜಿದ್ ಅತ್ಯಂತ ಮೂಲಭೂತವಾದಿ ಯುವಕನಾಗಿ ಪರಿವರ್ತನೆಗೊಂಡು ಜಿಹಾದ್ ಮಾರ್ಗವನ್ನು ಹಿಡಿಯಲು ಉದ್ದೇಶಿಸಿದ.
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ .
 

Share this Story:

Follow Webdunia kannada

ಮುಂದಿನ ಸುದ್ದಿ

ಹುಚ್ಚನಾಗಿದ್ದ ವಿಜ್ಞಾನಿಯ ಕರುಣಾಜನಕ ಕಥೆ ಇದು!