ರಂಗಾರೆಡ್ಡಿ ಬಳಿ ಭೀಕರ ಅಪಘಾತ: 20ಕ್ಕೂ ಅಧಿಕ ಸಾವು, ಹಲವು ಮಂದಿಗೆ ಗಂಭೀರ

Sampriya
ಸೋಮವಾರ, 3 ನವೆಂಬರ್ 2025 (17:38 IST)
Photo Credit X
ಹೈದರಾಬಾದ್: ಟಿಜಿಎಸ್‌ಆರ್‌ಟಿಸಿ ಬಸ್ ಮತ್ತು ಜಲ್ಲಿಕಲ್ಲು ತುಂಬಿದ ಟ್ರಕ್ ನಡುವೆ ಡಿಕ್ಕಿ ಸಂಭವಿಸಿದ ಭೀಕರ ಅಪಘಾತದಲ್ಲಿ 20 ಜನರು ಸಾವನ್ನಪ್ಪಿ, ಹಲವು ಮಂದಿ ಗಂಭೀರ ಗಾಯಗೊಂಡ ಹೃದಯ ವಿದ್ರಾಹಕ ಘಟನೆ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ಖಾನಾಪುರ ಗೇಟ್ ಬಳಿ ನಡೆದಿದೆ. 

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾನದಲ್ಲಿ ಹರಿದಾಡುತ್ತಿದ್ದು, ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದವರ ಸಂಕಷ್ಟ ಕರುಳು ಹಿಂಡುವಂತಿದೆ. 

ಸೈಟ್‌ನ ವೀಡಿಯೊವು ರಸ್ತೆಗೆ ಅಡ್ಡಲಾಗಿ ಉರುಳಿದ ಬಸ್ ಅನ್ನು ತೋರಿಸುತ್ತದೆ, ಗಾಯಗೊಂಡ ಪ್ರಯಾಣಿಕರು ಸಹಾಯಕ್ಕಾಗಿ ಅಳುತ್ತಿರುವುದನ್ನು ಕಾಣಬಹುದು. 

ಬಸ್ಸಿನೊಳಗೆ ಸಿಲುಕಿದ್ದ ಹಲವಾರು ಪ್ರಯಾಣಿಕರನ್ನು ಸಮೀಪದ ನಿವಾಸಿಗಳು ಕೂಡಲೇ ರಕ್ಷಿಸಿದ್ದಾರೆ.

ಚೇವೆಲ್ಲಾ ಎಸಿಪಿ ಬಿ ಕಿಶನ್ ಪ್ರಕಾರ, ಆರ್ ಟಿಸಿ ಬಸ್ ತಾಂಡೂರಿನಿಂದ ಹೊರಟು ಚೇವೆಲ್ಲಾ ಕಡೆಗೆ ಹೋಗುತ್ತಿತ್ತು.

ಅಪಘಾತ ಸಂಭವಿಸಿದಾಗ ಟ್ರಕ್ ಸರಿಯಾದ ಲೇನ್‌ನಲ್ಲಿತ್ತು ಎಂದು ರಾಜೇಂದ್ರನಗರ ಡಿಸಿಪಿ ಯೋಗೇಶ್ ಗೌತಮ್ ಹೇಳಿದ್ದಾರೆ.

ಅಪಘಾತದ ವೇಳೆ ಬಸ್‌ನಲ್ಲಿ 40 ಮಂದಿ ಪ್ರಯಾಣಿಕರಿದ್ದರು. ಡಿಕ್ಕಿಯ ನಂತರ ಲಾರಿಯಲ್ಲಿದ್ದ ಜಲ್ಲಿಕಲ್ಲು ಲೋಡ್ ಪ್ರಯಾಣಿಕರ ಮೇಲೆ ಬಿದ್ದಿದ್ದು, ಪರಿಸ್ಥಿತಿ ಹದಗೆಟ್ಟಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸೇನೆಯಲ್ಲಿ ಮೇಲ್ಜಾತಿಯವರದ್ದೇ ಕಂಟ್ರೋಲ್ ಎಂದ ರಾಹುಲ್ ಗಾಂಧಿ: ಸೇನೆಯಲ್ಲೂ ಜಾತಿ ಹುಡುಕ್ತಿದ್ದಾರೆ ಎಂದ ಬಿಜೆಪಿ

Karnataka Weather: ಇಂದೂ ಇದೆ ಈ ಜಿಲ್ಲೆಗಳಿಗೆ ಮಳೆಯ ಸೂಚನೆ

ನಿಮ್ ಥರಾ ಟರ್ಪಲ್ ಹಾಕಿ ಬಡತನ ಮುಚ್ಚಿಡಲ್ಲ: ಬಿಜೆಪಿಗೆ ಟಾಂಗ್ ಕೊಟ್ಟ ಪ್ರಿಯಾಂಕ್ ಖರ್ಗೆ

ರೈತರಿಗಾಗಿ ನಾಳೆ ನನ್ನ ಜನ್ಮದಿನವಾಗಿದ್ದರೂ ಹೋರಾಟಕ್ಕೆ ರೆಡಿ: ಬಿವೈ ವಿಜಯೇಂದ್ರ

ಅತ್ಯಂತ ನಿಷ್ಠಾವಂತ ರಾಜಕಾರಣಿ: ಹೆಚ್‌ವೈ ಮೇಟಿ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ

ಮುಂದಿನ ಸುದ್ದಿ
Show comments