ಹಿಂಸಾಚಾರದಿಂದ ಹೊತ್ತಿ ಉರಿಯುತ್ತಿರುವ ಕಾಶ್ಮೀರದಲ್ಲಿ ಶಾಂತಿ ಮೂಡಿಸಲು ಸರ್ವ ಪಕ್ಷ ನಿಯೋಗ ತೆರಳಿರುವ ನಡುವೆ, ತಾನು ಇಡೀ ಕಾಶ್ಮೀರವನ್ನು ಭಾರತದ ಸಶಸ್ತ್ರ ಪಡೆಗಳಿಗೆ ಮಸಣವಾಗಿ ಮಾಡುವುದಾಗಿ ಹಿಜ್ಬುಲ್ ಮುಜಾಹಿದ್ದೀನ್ ಮುಖಂಡ ಸಯ್ಯದ್ ಸಲಾಹುದ್ದೀನ್ ಎಚ್ಚರಿಸಿದ್ದಾನೆ.
ಸರ್ವಪಕ್ಷ ಸದಸ್ಯರ ಸಭೆಗೆ ಯಾವುದೇ ಮನ್ನಣೆ ನೀಡದೇ ಮಾತುಕತೆ ನಿಷ್ಫಲ ಪ್ರಯತ್ನವಾಗಿದ್ದು, ಕಾಶ್ಮೀರ ವಿಷಯಕ್ಕೆ ಏಕಮಾತ್ರ ಉತ್ತರ ಭಯೋತ್ಪಾದನೆ ಎಂದಿದ್ದಾನೆ.
ಯಾವುದೇ ಔಪಚಾರಿಕ, ಶಾಂತಿಯುತ ಮಾರ್ಗವಿಲ್ಲವೆಂದು ಕಾಶ್ಮೀರ ನಾಯಕತ್ವ, ಜನರು ಮತ್ತು ಮುಜಾಹಿದ್ದೀನ್ ತಿಳಿಯಬೇಕು ಎಂದು ಹೇಳಿದ ಸಲಾಹುದ್ದೀನ್, ತನ್ನ ಶಕ್ತಿಯ ಬಗ್ಗೆ ಎಚ್ಚರಿಸಿ ಇಡೀ ಪ್ರದೇಶವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವುದಾಗಿ ಬೆದರಿಕೆ ಹಾಕಿದ. ಹಿಜ್ಬುಲ್ ಉಗ್ರಗಾಮಿ ಬುರ್ಹಾನ್ ವಾನಿ ಜುಲೈ 8ರಂದು ಹತನಾದ ಬಳಿಕ ಭಯೋತ್ಪಾದನೆ ಆಂದೋಳನ ತೀವ್ರ ಸ್ವರೂಪ ಪಡೆದುಕೊಂಡಿದೆ ಎಂದು ಸಲಾಹುದ್ದೀನ್ ತಿಳಿಸಿದ್ದಾನೆ.