ತಿರುಪತಿ: ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಇನ್ನು ಮುಂದೆ ಕೇವಲ ಹಿಂದೂಗಳಿಗೆ ಮಾತ್ರ ಅವಕಾಶ ಎಂದು ಟಿಟಿಡಿಗೆ ಹೊಸದಾಗಿ ಆಯ್ಕೆಯಾದ ಮುಖ್ಯಸ್ಥ ಬಿಆರ್ ನಾಯ್ಡು ಕಟ್ಟುನಿಟ್ಟಾಗಿ ಹೇಳಿದ್ದಾರೆ.
ಈ ಹಿಂದೆ ಜಗನ್ ಸರ್ಕಾರದ ಅವಧಿಯಲ್ಲಿ ಅನ್ಯಮತೀಯರೂ ಟಿಟಿಡಿಯ ಮುಖ್ಯ ಹುದ್ದೆಗಳಲ್ಲಿದ್ದರು. ಈ ನಡುವೆ ತಿರುಪತಿಯಲ್ಲಿ ಮತಾಂತರ, ಪ್ರಸಾದದಲ್ಲಿ ಕಲಬೆರಕೆ ಆರೋಪಗಳು ಕೇಳಿಬಂದಿದ್ದವು. ಇದೀಗ ನೂತನವಾಗಿ ಜಾರಿಗೆ ಬಂದಿರುವ ಚಂದ್ರಬಾಬು ನಾಯ್ಡು ಸರ್ಕಾರ ತಿರುಪತಿ ಆಡಳಿತ ಮಂಡಳಿಯಲ್ಲಿ ಭಾರೀ ಬದಲಾವಣೆ ತಂದಿದೆ.
ತಾವು ಅಧಿಕಾರಕ್ಕೆ ಬಂದ ಬೆನ್ನಲ್ಲೇ ಸಿಎಂ ಚಂದ್ರಬಾಬು ನಾಯ್ಡು ತಿರುಪತಿಯಲ್ಲಿ ಕೇವಲ ಹಿಂದೂಗಳಿಗೆ ಮಾತ್ರ ಅವಕಾಶ ಎಂದಿದ್ದರು. ಅದರಂತೆ ಈಗ ಟಿಟಿಡಿಯಲ್ಲಿ ಸಾಕಷ್ಟುಬದಲಾವಣೆ ತರುತ್ತಿದ್ದಾರೆ. ಇದೀಗ ಹೊಸ ಮುಖ್ಯಸ್ಥರನ್ನು ನೇಮಕ ಮಾಡಲಾಗಿದ್ದು, ಬಿಆರ್ ನಾಯ್ಡು ಕೂಡಾ ಇನ್ನು ಮುಂದೆ ಟಿಟಿಡಿಯಲ್ಲಿ ಅನ್ಯಮತೀಯರಿಗೆ ಅವಕಾಶವಿಲ್ಲ ಎಂದಿದ್ದಾರೆ.
ತಿರುಪತಿ ದೇವಸ್ಥಾನಕ್ಕಾಗಿ ಕೆಲಸ ಮಾಡುವವರೆಲ್ಲರೂ ಹಿಂದೂಗಳೇ ಆಗಿರಬೇಕು. ಇದು ನನ್ನ ಮೊದಲ ಆದ್ಯತೆಯಾಗಿರಲಿದೆ. ಇಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವೆಲ್ಲವನ್ನೂ ಒಂದೊಂದಾಗಿ ಬಗೆಹರಿಸಲಾಗುವುದು ಎಂದು ಬಿಆರ್ ನಾಯ್ಡು ಹೇಳಿದ್ದಾರೆ.