Publish Date: Mon, 14 Feb 2022 (13:46 IST)
Updated Date: Mon, 14 Feb 2022 (20:28 IST)
ಜೈಪುರ : ಕರ್ನಾಟಕದಲ್ಲಿ ಹಿಜಾಬ್ ವಿವಾದ ಭುಗಿಲೆದ್ದ ಬೆನ್ನಲ್ಲೇ, ರಾಜಸ್ಥಾನದ ಕಾಲೇಜೊಂದರ ಕೆಲ ವಿದ್ಯಾರ್ಥಿನಿಯರು ದಿಢೀರನೆ ಕಾಲೇಜಿಗೆ ಬುರ್ಖಾ ಮತ್ತು ಹಿಜಾಬ್ ಧರಿಸಿ ಆಗಮಿಸುತ್ತಿರುವ ಘಟನೆ ನಡೆದಿದೆ.
ಆದರೆ ಬುರ್ಖಾ ಧರಿಸಿಕೊಂಡು ಕಾಲೇಜು ಪ್ರವೇಶಕ್ಕೆ ಅನುಮತಿ ಖಾಸಗಿ ಕಾಲೇಜಿನ ಶಿಕ್ಷಕರು ಅನುಮತಿ ನಿರಾಕರಿಸಿದ್ದಾರೆ. ಬಳಿಕ ವಿದ್ಯಾರ್ಥಿನಿಯರು ಪೋಷಕರನ್ನು ಕರೆತಂದು ಕಾಲೇಜಿನಲ್ಲಿ ಗದ್ದಲ ಎಬ್ಬಿಸಿದ್ದಾರೆ.
ಆದರೆ ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ತಿಳಿ ಹೇಳಿದ ಬಳಿಕ ವಿದ್ಯಾರ್ಥಿನಿಯರು ಬುರ್ಖಾ ಹಿಜಾಬ್ ತೆಗೆದಿಟ್ಟು ಕಾಲೇಜು ಪ್ರವೇಶ ಮಾಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಕಾಲೇಜು ಆಡಳಿತ ಮಂಡಳಿ, ಕೆಲ ವಿದ್ಯಾರ್ಥಿನಿಯರು ಕಳೆದ 4-5 ದಿನಗಳಿಂದ ಇದ್ದಕ್ಕಿದ್ದಂತೆ ಬುರ್ಖಾ ಧರಿಸಿ ಆಗಮಿಸಲು ತೊಡಗಿದ್ದಾರೆ.