Select Your Language

Notifications

webdunia
webdunia
webdunia
webdunia

ಮೋದಿಯನ್ನು ಟೀಕಿಸದಿದ್ದರೆ ಸಂತೋಷ್ ಲಾಡ್ ನೌಕರಿ ಹೋಗುತ್ತೆ: ಪ್ರಲ್ಹಾದ್ ಜೋಶಿ

Prahlad Joshi

Sampriya

ಹುಬ್ಬಳ್ಳಿ , ಮಂಗಳವಾರ, 19 ಮಾರ್ಚ್ 2024 (16:47 IST)
Photo Courtesy X
ಹುಬ್ಬಳ್ಳಿ:  ಮೋದಿಯನ್ನು ಟೀಕಿಸದಿದ್ದರೆ ಸಚಿವ ಸಂತೋಷ್ ಲಾಡ್‌ ಅವರ ನೌಕರಿ ಹೋಗುತ್ತೆ. ಈ ಬಗ್ಗೆ ಹೈಕಮಾಂಡ್‌ನಿಂದ ಅವರಿಗೆ ಆರ್ಡರ್‌ ಆಗಿದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
 
ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸಚಿವ ಸಂತೋಷ್ ಲಾಡ್ ಅವರಿಗೆ ಟಾಂಗ್ ಕೊಟ್ಟಿರುವ ವಿಡಿಯೋದಲ್ಲಿ ಹೀಗಿದೆ:
 
ಪ್ರಧಾನಿ ನರೇಂದ್ರ ಮೋದಿ  ಹಾಗೂ ತನ್ನ ವಿರುದ್ಧ ನಿರಂತರವಾಗಿ ಟೀಕಿಸುತ್ತಿರುವ ಸಚಿವ ಸಂತೋಷ್ ಲಾಡ್ ಅವರನ್ನು ಯಾಕೆ ನಮ್ಮಿಬ್ಬರನ್ನು ಟೀಕಿಸುತ್ತೀರಾ ಎಂದು ಪ್ರಶ್ನಿಸಿದ್ದೆ. ಅದಕ್ಕೆ ಅವರು ಸಚಿವ ಸ್ಥಾನವನ್ನು  ಉಳಿಸಿಕೊಳ್ಳಲು ಉತ್ತರಿಸಿದ್ದರು ಎಂದು ಹೇಳಿದ್ದಾಗಿ ಜೋಶಿ ಹೇಳಿರುವ ವಿಡಿಯೋದಲ್ಲಿ ಕಾಣಬಹುದು. 
 
ವಿಮಾನದಲ್ಲಿ ನಾನು ಮತ್ತು ಸಂತೋಷ್ ಲಾಡ್ ಒಟ್ಟಿಗೆ ಬರುತ್ತಿದ್ದಾಗ, ಯಾಕಪ್ಪಾ ನನ್ನ ಮತ್ತು ಮೋದಿ ವಿರುದ್ಧ ಟೀಕೆ ಮಡುತ್ತಿದ್ದಿಯಾಲ್ಲ, ನನ್ನನ್ನು ಬೈದರೆ ಸರಿ, ಮೋದಿಗೆ ಯಾಕೆ ಟೀಕೆ ಮಾಡುತ್ತಿದ್ದಿಯಾ ಎಂದು ಸಂತೋಷ್ ಲಾಡ್ ಅವರನ್ನು ಕೇಳಿದೆ. ಅದಕ್ಕೆ ಸಂತೋಷ್ ಲಾಡ್ ಹಿಂದಿಯಲ್ಲಿ, ಬೈಯದೆ ಇದ್ದರೆ ನನ್ನ ನೌಕರಿ ಹೋಗುತ್ತೆ. ಈ ಬಗ್ಗೆ ಹೈಕಮಾಂಡ್ ಆರ್ಡರ್ ಆಗಿದೆ. ಆವಾಗಿನಿಂದ ನಾನು ತಲೆಕೆಡಿಸಿಕೊಂಡಿಲ್ಲ, ನೀವೂ ತಲೆ ಕೆಡಿಸಿಕೊಳ್ಳಬೇಡಿ ಎಂದು ಹೇಳಿದ್ದಾಗಿ ಜೋಶಿ ಹೇಳುವುದನ್ನು ಕೇಳಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಟ್ಯಾಂಗರ್‌ ಮಾಫಿಯಾಗೆ ಶರಣಾದ ಸರ್ಕಾರ: ಜನರಿಂದ ಹಣ ಸುಲಿಗೆ ಎಂದ ಆರ್.ಅಶೋಕ್