Publish Date: Tue, 26 Jun 2018 (10:16 IST)
Updated Date: Tue, 26 Jun 2018 (10:19 IST)
ನವದೆಹಲಿ: ಪ್ರಧಾನಿ ಮೋದಿ ಜೀವಕ್ಕೆ ಬೆದರಿಕೆ ಇದೆ ಎಂಬ ಕಾರಣಕ್ಕೆ ಎಲ್ಲಾ ರಾಜ್ಯಗಳಿಗೂ ಕೇಂದ್ರ ಗೃಹ ಇಲಾಖೆ ಎಚ್ಚರಿಕೆ ಸಂದೇಶ ರವಾನಿಸಿದೆ.
ಯಾವುದೇ ಕಾರಣಕ್ಕೂ ಪ್ರಧಾನಿ ಮೋದಿ ಸದ್ಯಕ್ಕೆ ರೋಡ್ ಶೋ ನಡೆಸುವಂತಿಲ್ಲ. ಹಾಗೆಯೇ ಭದ್ರತಾ ಅಧಿಕಾರಿಗಳ ತಪಾಸಣೆಯಿಲ್ಲದೇ ಯಾರೂ ಪ್ರಧಾನಿ ಸನಿಹ ಸುಳಿಯುವಂತೆಯೂ ಇಲ್ಲ. ಜನಪ್ರತಿನಿಧಿಗಳಾದರೂ ಸರಿಯೇ ಸೂಕ್ತ ತಪಾಸಣೆಯಿಲ್ಲದೇ ಪ್ರಧಾನಿ ಬಳಿ ಹೋಗುವಂತಿಲ್ಲ ಎಂದು ಗೃಹ ಇಲಾಖೆ ಸುತ್ತೋಲೆ ಹೊರಡಿಸಿದೆ.
ಮೊನ್ನೆಯಷ್ಟೇ ನಕ್ಸಲರು ಪ್ರಧಾನಿ ಹತ್ಯೆಗೆ ರಾಜೀವ್ ಗಾಂಧಿ ಮಾದರಿ ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ಸುದ್ದಿ ಬಂದಿತ್ತು. ಮುಂದೆ ಲೋಕಸಭೆ ಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ ಮೋದಿ ಹಲವು ರೋಡ್ ಶೋಗಳಲ್ಲಿ ಭಾಗವಹಿಸಬೇಕಿತ್ತು. ಆದರೆ ರೋಡ್ ಶೋಗಳನ್ನು ಕಡಿತಗೊಳಿಸುವಂತೆ ಸೂಚನೆ ರವಾನೆಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.