ನವದೆಹಲಿ: ಸೇನಾ ಅಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ವಿವಾದಾತ್ಮಕ ಹೇಳಿಕೆಗಾಗಿ ಮಧ್ಯಪ್ರದೇಶ ಸಚಿವ ವಿಜಯ್ ಶಾ ಅವರ ಕ್ಷಮೆಯಾಚನೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದ್ದು, ಹೇಳಿಕೆಯನ್ನು ರಾಷ್ಟ್ರೀಯ ಮುಜುಗರ ಎಂದು ಬಣ್ಣಿಸಿದೆ.
ಸಚಿವರ ಹೇಳಿಕೆಯಿಂದ ಇಡೀ ರಾಷ್ಟ್ರವು ನಾಚಿಕೆಪಡುತ್ತಿದೆ ಎಂದಾ ಸುಪ್ರೀಂ ಕೋರ್ಟ್, ನಿಜವಾದ ಕ್ಷಮೆಯಾಚನೆ ಅಥವಾ ಸೂಕ್ತ ವಿಷಾದದ ಮೂಲಕ ತಮ್ಮ ನಡತೆಯಲ್ಲಿ ಬದಲು ಮಾಡಿಕೊಳ್ಳಿ ಎಂದು ವಿಜಯ್ ಶಾಗೆ ಮಾತಿನಲ್ಲಿ ತಿವಿದಿದೆ.
ಕ್ರೂರವಾಗಿ ಮಾತನಾಡಯವ ಮೊದಲು ಸಂವೇದನಾಶೀಲರಾಗಿರಬೇಕು ಎಂದು ನ್ಯಾಯಾಲಯ ಬುದ್ದಿ ಹೇಳಿದೆ.
ಈ ನಡುವೆ ನ್ಯಾಯಾಲಯವು ಶಾ ಅವರ ಬಂಧನಕ್ಕೆ ತಡೆ ನೀಡಿದೆ. ಆದರೆ ವಿಜಯ್ ಶಾ ಕ್ಷಮೆಯಾಚಿಸಿರುವುದನ್ನು ಪ್ರಶ್ನಿಸಿದ ಉನ್ನತ ನ್ಯಾಯಾಲಯವು, “ಕ್ಷಮೆಯಾಚಿಸಲು ಯಾವುದೇ ನ್ಯಾಯಾಂಗ ನಿಂದನೆ ಮಾಡಿಲ್ಲ” ಎಂದು ಹೇಳಿದೆ