ನ್ಯೂಯಾರ್ಕ್ : 13ನೇ ಶತಮಾನದಲ್ಲೇ ಇರುವ ತಾಲಿಬಾನ್ನ್ನು 21ನೇ ಶತಮಾನಕ್ಕೆ ತರಲು ಸಹಾಯ ಮಾಡಿ ಎಂದು ಮುಸ್ಲಿಂ ರಾಷ್ಟ್ರಗಳಿಗೆ ವಿಶ್ವಸಂಸ್ಥೆ ಹಿರಿಯ ಅಧಿಕಾರಿಯೂ ಆಗಿರುವ ಮುಸ್ಲಿಂ ಮಹಿಳೆ ಅಮೀನಾ ಮೊಹಮ್ಮದ್ ಕರೆ ನೀಡಿದ್ದಾರೆ.
ಡೆಪ್ಯುಟಿ ಸೆಕ್ರೆಟರಿ-ಜನರಲ್ ಅಮಿನಾ ಮೊಹಮ್ಮದ್ ಅವರು, ವಿದೇಶಾಂಗ ಸಚಿವರು ಮತ್ತು ಉಪ ಪ್ರಧಾನ ಮಂತ್ರಿ ಸೇರಿದಂತೆ ನಾಲ್ಕು ತಾಲಿಬಾನ್ ಮಂತ್ರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಕಂಪನಿಗಳಿಂದ ಮಹಿಳೆಯರನ್ನು ತೆಗೆದುಹಾಕುವ ಬಗ್ಗೆ ತಾಲಿಬಾನ್ ಘೋಷಿಸಿತ್ತು. ಇಂತಹ ಸನ್ನಿವೇಶದಲ್ಲಿ ಮಾನವೀಯ ತತ್ವಗಳಲ್ಲಿ ತಾರತಮ್ಯ ಮಾಡದಿರುವುದು ಪ್ರಮುಖ ಭಾಗವಾಗಿದೆ ಎಂದು ನಾವು ಅವರಿಗೆ ನೆನಪಿಸಿದ್ದೇವೆ ಎಂದು ಅಮೀನಾ ತಿಳಿಸಿದ್ದಾರೆ.