Select Your Language

Notifications

webdunia
webdunia
webdunia
webdunia

ಮುಂಗಾರು ಮುನ್ಸೂಚನೆ ಮಾಮೂಲಿಗಿಂತ ದುರ್ಬಲ ಮಳೆ; ಸ್ಕೈಮೆಟ್ ವರದಿ

ಮುಂಗಾರು ಮುನ್ಸೂಚನೆ ಮಾಮೂಲಿಗಿಂತ ದುರ್ಬಲ ಮಳೆ; ಸ್ಕೈಮೆಟ್ ವರದಿ
ನವದೆಹಲಿ , ಮಂಗಳವಾರ, 24 ಆಗಸ್ಟ್ 2021 (10:16 IST)
ನೈರುತ್ಯ ಮಾನ್ಸೂನ್ ಆಗಸ್ಟ್ 1 ರ ಎರಡನೇ ವಾರಗಳಲ್ಲಿ 2 ನೇ ಮಾನ್ಸೂನ್ ವಿರಾಮದ ಹಂತವನ್ನು ಎದುರಿಸಿದೆ (ಕಡಿಮೆ ಮಳೆ) ಮುಂಗಾರು ದುರ್ಬಲ ಪರಿಸ್ಥಿತಿಗಳಿಂದಾಗಿ ಸಂಪೂರ್ಣ ಭಾರತವು ಆಗಸ್ಟ್ ಮಧ್ಯದಲ್ಲಿ ಶೇ.9 ರಷ್ಟು ಮಳೆಯ ಪ್ರಮಾಣವನ್ನು ಕುಗ್ಗಿಸಲು ಕಾರಣವಾಗಿದೆ.

ಭಾರತದ ಪ್ರಮುಖ ಹವಾಮಾನ ವಿಶ್ಲೇಷಣಾ ಸಂಸ್ಥೆ ಸ್ಕೈಮೆಟ್ ವೆದರ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ (ಸ್ಕೈಮೆಟ್ ಹವಾಮಾನ ಸೇವೆಗಳ ಸಂಸ್ಥೆ) 2021 ರ ಮುಂಗಾರು ಮುನ್ಸೂಚನೆಯ ವಿವರವನ್ನು ಏಪ್ರಿಲ್ 13, 2021 ರಂದು ಬಿಡುಗಡೆ ಮಾಡಿತ್ತು ಹಾಗೂ ಇದೀಗ ತನ್ನ ಹವಾಮಾನ ಮುನ್ಸೂಚನೆ ವಿವರಗಳನ್ನು ನವೀಕರಿಸುತ್ತಿದೆ. ಈ ನವೀಕರಣದ ಕುರಿತು ಸ್ಕೈಮೆಟ್ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು 60% ಮಾಮೂಲಿಗಿಂತ ದುರ್ಬಲವಾಗಿದೆ ಎಂದು ನಂಬಿದ್ದು ದೋಷ ಮಾರ್ಜಿನ್ +/- 4% ನೊಂದಿಗೆ ಮುಂಗಾರು ಮಳೆ ದೀರ್ಘಾವಧಿಯ ಸರಾಸರಿ 94% ನಷ್ಟು ಆಗಿರುತ್ತದೆ (ದೀರ್ಘ ಅವಧಿಯ ಅಂದಾಜು 880.6 ಎಮ್ಎಮ್ ಜೂನ್ ತಿಂಗಳಿನಿಂದ ಸಪ್ಟೆಂಬರ್ವರೆಗೆ 4 ತಿಂಗಳು) ಎಂದು ತಿಳಿಸಿದೆ.
ನೈರುತ್ಯ ಮಾನ್ಸೂನ್ ಸರಿಯಾದ ಸಮಯದಲ್ಲಿ ಸುದೀರ್ಘ ಆರಂಭ ಸರಾಸರಿ 110% ನೊಂದಿಗೆ ಜೂನ್ ಕೊನೆಯಲ್ಲಿ ಉತ್ತಮ ಆರಂಭವನ್ನು ನೀಡಿತು. ಜುಲೈ ತಿಂಗಳಲ್ಲಿ ಮಳೆ ಅಷ್ಟೊಂದು ಪ್ರಖರವಾಗಿರಲಿಲ್ಲ ಹೀಗಾಗಿ ಜುಲೈ 11 ರಲ್ಲಿಯೇ ಮಳೆ ತನ್ನ ಆರ್ಭಟವನ್ನು ಅರ್ಧಕ್ಕೆ ನಿಲ್ಲಿಸಿತ್ತು. ಇಲ್ಲಿ ನಾವು ಎಲ್ಪಿಎ ಮಟ್ಟವನ್ನು ನೋಡುವುದಾದರೆ 93% ವಾಗಿದ್ದು ಸಾಮಾನ್ಯಕ್ಕಿಂತ ಕಡಿಮೆ ಮಳೆಯನ್ನು ಈ ತಿಂಗಳು ಹೊಂದಿತ್ತು. ಸ್ಕೈಮೆಟ್ ಮುನ್ಸೂಚನೆಯ ಎಲ್ಪಿಎ ಅಂಕಿ ಅಂಶಗಳಾದ 106% ಹಾಗೂ 97% ಗೆ ತದ್ವಿರುದ್ಧವಾಗಿ ಜೂನ್ ಹಾಗೂ ಜುಲೈ ತಿಂಗಳ ಎಲ್ಪಿಎ ಯು 110% ಹಾಗೂ 93% ವನ್ನು ದಾಖಲಿಸಿದೆ.
ನೈರುತ್ಯ ಮಾನ್ಸೂನ್ ಆಗಸ್ಟ್ 1 ರ ಎರಡನೇ ವಾರಗಳಲ್ಲಿ 2 ನೇ ಮಾನ್ಸೂನ್ ವಿರಾಮದ ಹಂತವನ್ನು ಎದುರಿಸಿದೆ (ಕಡಿಮೆ ಮಳೆ) ಮುಂಗಾರು ದುರ್ಬಲ ಪರಿಸ್ಥಿತಿಗಳಿಂದಾಗಿ ಸಂಪೂರ್ಣ ಭಾರತವು ಆಗಸ್ಟ್ ಮಧ್ಯದಲ್ಲಿ 9% ರಷ್ಟು ಮಳೆಯ ಪ್ರಮಾಣವನ್ನು ಕುಗ್ಗಿಸಲು ಕಾರಣವಾಗಿದೆ. ಮಾನ್ಸೂನ್ನ ಸಾಮಾನ್ಯ ಸ್ಥಿತಿಯು ಇದುವರೆಗೆ ಸುಧಾರಣೆಗೊಂಡಿಲ್ಲ ಎಂಬುದು ಇಲ್ಲಿ ಪ್ರಮುಖ ಅಂಶವಾಗಿದೆ.
ಭೌಗೋಳಿಕ ಅಪಾಯದ ದೃಷ್ಟಿಯಿಂದ ಗುಜರಾತ್, ರಾಜಸ್ಥಾನ, ಒಡಿಸ್ಸಾ ಕೇರಳ ಹಾಗೂ ಈಶಾನ್ಯ ಭಾರತವು ಮಳೆಯ ಕೊರತೆಯಿಂದ ಹಾನಿಗೊಳಗಾಗಲಿವೆ ಎಂಬ ಮಾಹಿತಿ ದೊರೆತಿದೆ. ಈಗಾಗಲೇ ಗುಜರಾತ್ ಹಾಗೂ ಪಶ್ಚಿಮ ರಾಜಸ್ಥಾನ ಪ್ರದೇಶಗಳಲ್ಲಿ ಬರಗಾಲದ ಲಕ್ಷಣಗಳು ತಲೆದೋರುತ್ತಿವೆ. ಈ ಬಾರಿ ಸಮರ್ಪಕ ಮಳೆ ಕಂಡಂತಹ ಪ್ರದೇಶಗಳೆಂದರೆ ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶದ ಭಾಗಗಳಾಗಿವೆ. ಮಳೆಯನ್ನು ಆಶ್ರಯಿಸಿರುವ ಕೇಂದ್ರಭಾಗಗಳ ಕೃಷಿಭೂಮಿಯಲ್ಲಿ ಆಹಾರ ಉತ್ಪಾದನೆಗಳಿಗೆ ಯಾವುದೇ ತೊಡಕು ಸಂಭವಿಸುವುದಿಲ್ಲ.
ಸ್ಕೈಮೆಟ್ನ ವ್ಯವಸ್ಥಾಪಕ ನಿರ್ದೇಶಕರಾದ ಜತಿನ್ ಸಿಂಗ್ ಮುಂಗಾರು ಮಳೆ ದುರ್ಬಲಗೊಂಡಿರುವುದಕ್ಕೆ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದು ಹಿಂದೂ ಮಹಾಸಾಗರದಲ್ಲಿ IOD (ಹಿಂದೂ ಮಹಾಸಾಗರ ದ್ವಿಧ್ರುವಿ ಅಂದರೆ ಎರಡು ಪ್ರದೇಶಗಳ ನಡುವಿನ ಸಮುದ್ರದ ಮೇಲ್ಮೈ ತಾಪಮಾನದಲ್ಲಿನ ವ್ಯತ್ಯಾಸ) ದೀರ್ಘಾವಧಿಯ ಹಂತ ಹಾಗೂ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ವಿಸ್ತರಿತ ಮಳೆ ವಿರಾಮ ಪರಿಸ್ಥಿತಿಗಳಾಗಿವೆ ಎಂದು ತಿಳಿಸಿದ್ದಾರೆ. ಸಪ್ಟೆಂಬರ್ನಲ್ಲಿ ಉಂಟಾಗುವ IOD ಹೊರಹೊಮ್ಮುವಿಕೆ ಕುರಿತು ಸ್ಪಷ್ಟ ಮಾಹಿತಿ ಇಲ್ಲ ಎಂದು ಜತಿನ್ ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ವಿದೇಶ ಪ್ರವಾಸದಿಂದ ಹಿಂದಿರುಗಿದ ಯಡಿಯೂರಪ್ಪ; 25 ದಿನಗಳ ನಂತರ ರಾಜ್ಯಾದ್ಯಂತ ಪ್ರವಾಸ