Select Your Language

Notifications

webdunia
webdunia
webdunia
webdunia

ಭಾರೀ ಮಳೆಗೆ ಮದುವೆ ಮನೆಯೇ ಕುಸಿದು ಆಪತ್ತು ಬಂತು!

ಭಾರೀ ಮಳೆಗೆ ಮದುವೆ ಮನೆಯೇ ಕುಸಿದು ಆಪತ್ತು ಬಂತು!
Rajasthan , ಗುರುವಾರ, 11 ಮೇ 2017 (09:32 IST)
ರಾಜಸ್ತಾನ್: ಭಾರೀ ಮಳೆ ಎಂತೆಂತಹಾ ಅನಾಹುತ ತರುತ್ತದೆ ನೋಡಿ. ಇಲ್ಲೊಂದು ಕಡೆ ವರುಣ ಮದುವೆ ಮನೆಯನ್ನೇ ಮಸಣದ ಮನೆ ಮಾಡಿಬಿಟ್ಟ.

 
ಭಾರೀ ಮಳೆಗೆ ಗೋಡೆ ಕುಸಿದು ರಾಜಸ್ಥಾನದ ಬಾರತ್ ಪುರ ಎಂಬಲ್ಲಿ 26 ಮಂದಿ ಸಾವನ್ನಪ್ಪಿದ್ದು, 28 ಮಂದಿ ಗಾಯಗೊಂಡಿದ್ದಾರೆ. ಬುಧವಾರ ಭಾರೀ ಮಳೆ ಮತ್ತು ಗಾಳಿ ಬಂದಿತ್ತು. ಇದರಿಂದಾಗಿ ದುರಂತ ಸಂಭವಿಸಿದೆ.

ಮೃತರಲ್ಲಿ ನಾಲ್ವರು ಮಕ್ಕಳು ಮತ್ತು 11 ಮಹಿಳೆಯರು ಸೇರಿದ್ದಾರೆ. ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿದೆ. ಗೋಡೆ ಪಕ್ಕದಲ್ಲೇ ಊಟದ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಗೋಡೆ ಕುಸಿದು ಹಲವರ ಪ್ರಾಣಕ್ಕೆ ಕುತ್ತು ಬಂತು. ಘಟನೆಗೆ ಕಾರಣವೇನೆಂದು ಪೊಲೀಸರು ತನಿಖೆ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಸಂಸತ್ತಿನಲ್ಲಿ ಸ್ತನ ಪಾನ ಮಾಡಿದ ಸಂಸದೆ!