Select Your Language

Notifications

webdunia
webdunia
webdunia
webdunia

ಸಂಸತ್ತಿನಲ್ಲಿ ಸ್ತನ ಪಾನ ಮಾಡಿಸಿದ ಸಂಸದೆ!

ಸಂಸತ್ತಿನಲ್ಲಿ ಸ್ತನ ಪಾನ ಮಾಡಿಸಿದ ಸಂಸದೆ!
Sydney , ಗುರುವಾರ, 11 ಮೇ 2017 (09:06 IST)
ಸಿಡ್ನಿ: ಆಸ್ಟ್ರೇಲಿಯಾದ ಸಂಸದೆಯೊಬ್ಬಳು ಸಂಸತ್ತಿನಲ್ಲೇ ತನ್ನ ಮಗುವಿಗೆ ಸ್ತನ ಪಾನ ಮಾಡಿಸಿ ಈ ರೀತಿ ಮಾಡಿದ ಮೊದಲ ಸಂಸದೆ ಎಂಬ ದಾಖಲೆ ಮಾಡಿದ್ದಾರೆ.

 
ಸೆನೆಟರ್ ಲಾರಿಸ್ಸಾ ವಾಟರ್ಸ್ ತನ್ನ ಮಗುವಿಗೆ ಸಂಸತ್ತಿನಲ್ಲಿ ಸ್ತನಪಾನ ಮಾಡಿಸಿದ್ದಾರೆ. ಕಲಾಪ ನಡೆಯುತ್ತಿದ್ದಾಗ ಲಾರಿಸ್ಸಾ ತನ್ನ 2 ತಿಂಗಳ ಮಗುವಿನ ಹೊಟ್ಟೆ ತುಂಬಿಸಿದ್ದಾರೆ.

ಈ ಬಗ್ಗೆ ಹೆಮ್ಮೆಯಿಂದಲೇ ತನ್ನ ಟ್ವಿಟರ್ ನಲ್ಲಿ ಬರೆದುಕೊಂಡಿರುವ ಲಾರಿಸ್ಸಾ ಎಲ್ಲಾ ಸಂಸದರು ಹೀಗೆ ಪಾಲನೆ ಮತ್ತು ಸಂಸತ್ತಿನ ಕಲಾಪವನ್ನು ಒಟ್ಟೊಟ್ಟಿಗೆ ನಿಭಾಯಿಸಬೇಕು ಎಂದು ಸಲಹೆ ನೀಡಿದ್ದಾರೆ.

ಆಸ್ಟ್ರೇಲಿಆ ಸಂಸತ್ತಿನಲ್ಲಿ ಮಕ್ಕಳಿಗೆ ಪ್ರವೇಶವಿಲ್ಲ. ಆದರೆ ಸ್ತನಪಾನ ಮಾಡಿಸಬೇಕಾದ ಮಕ್ಕಳನ್ನು ಸಂಸತ್ತಿಗೆ ಕರೆತರಬಹುದಾದ ಹೊಸ ಮಸೂದೆ ತರಲು ಲಾರಸ್ಸಾ ಪ್ರಧಾನ ಪಾತ್ರ ವಹಿಸಿದ್ದರು. ಆಕೆಯ ನಿರ್ಧಾರವನ್ನು ಇತರ ಸಂಸದರೂ ಸ್ವಾಗತಿಸದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಜೀವ ಬೆದರಿಕೆ ಹಾಕಿದ ಶಾಸಕನಿಗೆ ಸಿಎಂ ಯೋಗಿ ಕರೆ