Select Your Language

Notifications

webdunia
webdunia
webdunia
webdunia

ಪ್ರಿಯತಮೆಯನ್ನು ಕೊಂದು, ಮೃತದೇಹವನ್ನು ಮೆಡಿಕಲ್ ಸ್ಟೋರ್ನಲ್ಲೇ ಇಟ್ಕೊಂಡಿದ್ದ !

ಪ್ರಿಯತಮೆಯನ್ನು ಕೊಂದು, ಮೃತದೇಹವನ್ನು ಮೆಡಿಕಲ್ ಸ್ಟೋರ್ನಲ್ಲೇ ಇಟ್ಕೊಂಡಿದ್ದ !
ನವದೆಹಲಿ , ಸೋಮವಾರ, 21 ನವೆಂಬರ್ 2022 (09:13 IST)
ರಾಯಪುರ : ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಮಾದರಿಯಲ್ಲೇ ಮತ್ತೊಂದು ಬೆಚ್ಚಿಬೀಳಿಸುವ ಪ್ರಕರಣ ಬೆಳಕಿಗೆ ಬಂದಿದೆ.

ತನ್ನ ಗೆಳತಿಯನ್ನ ಕೊಂದು ನಾಲ್ಕು ದಿನಗಳ ಕಾಲ ಮೆಡಿಕಲ್ ಸ್ಟೋರ್ನಲ್ಲಿ ಇಟ್ಟಿದ್ದ ಘಟನೆ ಛತ್ತೀಸಘಡದ ಬಿಲಾಸ್ಪುರ ಜಿಲ್ಲೆಯಲ್ಲಿ ನಡೆದಿದೆ.

ಮೆಡಿಕಲ್ ಸ್ಟೋರ್ ಮಾಲೀಕ ಆಶಿಶ್ ಸಾಹು ಹಣದ ಸಮಸ್ಯೆಯಿಂದ ತನ್ನ ಗೆಳತಿ ಪ್ರಿಯಾಂಕಾಳನ್ನು ಕೊಂದು ಶವವನ್ನು 4 ದಿನಗಳ ಕಾಲ ತನ್ನ ಅಂಗಡಿಯಲ್ಲಿಟ್ಟು ವಿಲೇವಾರಿ ಮಾಡಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದ.

ಮೃತದೇಹವನ್ನು ಬಟ್ಟೆಯೊಂದರಲ್ಲಿ ಸುತ್ತಿ ಕಾರಿನಲ್ಲಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.  ಪೊಲೀಸರ ಪ್ರಕಾರ, ಸಾಹು ಮತ್ತು ಭಿಲಾಯಿ ನಿವಾಸಿ ಪ್ರಿಯಾಂಕಾ ನಡುವೆ ಹಣಕಾಸಿನ ವಿಚಾರವಾಗಿ ಕೆಲ ದಿನಗಳಿಂದ ಜಗಳ ನಡೆಯುತ್ತಿತ್ತು. ಕೊಲೆಗೆ ಇದೇ ಕಾರಣ ಇರಬಹುದು ಎಂದು ಹೇಳಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆಶಿಗೆ ಸೆಡ್ಡು ಹೊಡೆದ ಸಿದ್ದರಾಮಯ್ಯ