Select Your Language

Notifications

webdunia
webdunia
webdunia
webdunia

ದಾಖಲೆ ಇದ್ರೆ ಕೋರ್ಟ್ ಗೆ ಹೋಗಿ ಅಕ್ರಮ ಸಾಬೀತು ಪಡಿಸಿ: ಅಮಿತ್ ಷಾ ಸವಾಲು

Court
ನವದೆಹಲಿ , ಶುಕ್ರವಾರ, 13 ಅಕ್ಟೋಬರ್ 2017 (17:17 IST)
ನವದೆಹಲಿ: ಅಕ್ರಮವೆಸಗಿರುವ ಬಗ್ಗೆ ನಿಮ್ಮ ಬಳಿ ದಾಖಲೆಯಿದ್ದರೆ ಕೋರ್ಟ್ ಗೆ ಹೋಗಿ ಆರೋಪ ಸಾಬೀತುಪಡಿಸಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಸವಾಲು ಹಾಕಿದ್ದಾರೆ.

ರಾಷ್ಟ್ರೀಯ ವಾಹಿನಿಯೊಂದಕ್ಕೆ ಹೇಳಿಕೆ ನೀಡಿರುವ ಅಮಿತ್ ಷಾ, ತಮ್ಮ ಪುತ್ರ ಜೈ ಷಾ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ನಿಮ್ಮ ಬಳಿ ದಾಖಲೆಯಿದ್ದರೆ ಆರೋಪವನ್ನು ಸಾಬೀತುಪಡಿಸಿ. ನನ್ನ ಮಗನ ಕಂಪನಿ ಮಾತ್ರವಲ್ಲ, ಸರ್ಕಾರ ಅಥವಾ ಬೋಫೋರ್ಸ್ ನಂತಹ ಪ್ರಕರಣದಲ್ಲಿ ಒಂದೇ ಒಂದು ರೂಪಾಯಿ ಕಿಕ್ ಬ್ಯಾಕ್ ಪಡೆದಿದ್ದರೆ ಸಾಬೀತು ಪಡಿಸಿ ಎಂದು ಕಾಂಗ್ರೆಸ್ ಗೆ ಷಾ ಸವಾಲು ಹಾಕಿದ್ದಾರೆ.

ಜೈ ಷಾ ಮಾಲಿಕತ್ವದ ಸಂಸ್ಥೆ ಟೆಂಪಲ್‌ ಎಂಟರ್‌ ಪ್ರೈಸಸ್‌ನ ಆದಾಯ ಒಂದು ವರ್ಷದ ಅವಧಿಯಲ್ಲಿ 50 ಸಾವಿರದಿಂದ 80 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ‘ದಿ ವೈರ್‌’ ಸುದ್ದಿತಾಣ ವರದಿ ಮಾಡಿತ್ತು. ಈ ಸಂಬಂಧ ವೆಬ್ ಸೈಟ್ ವಿರುದ್ಧ ಜೈ ಷಾ ನೂರು ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೋಷನ್‌ಬೇಗ್‌ ಬಳಸಿದ್ದ ಕೆಟ್ಟ ಪದಗಳನ್ನೇ ಬಳಸಿದ ಸಿ,ಟಿ.ರವಿ