Select Your Language

Notifications

webdunia
webdunia
webdunia
webdunia

Haryana Elections: ಹರ್ಯಾಣದಲ್ಲಿ ಕೌಂಟಿಂಗ್ ಸರಿ ಇಲ್ಲ, ಜಮ್ಮು ಕಾಶ್ಮೀರದಲ್ಲಿ ಸರಿ ಇದೆ: ಕಾಂಗ್ರೆಸ್ ಆರೋಪ

Jai Ram Ramesh

Krishnaveni K

ಹರ್ಯಾಣ , ಮಂಗಳವಾರ, 8 ಅಕ್ಟೋಬರ್ 2024 (13:55 IST)
ಹರ್ಯಾಣ: ಸತತ ಮೂರನೇ ಬಾರಿಗೆ ಹರ್ಯಾಣದಲ್ಲಿ ಬಿಜೆಪಿ ಅಧಿಕಾರಕ್ಕೇರಲು ಹೊರಟಿದೆ. ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತದತ್ತ ಬಿಜೆಪಿ ಸಾಗುತ್ತಿದ್ದರೆ ಇತ್ತ ಕಾಂಗ್ರೆಸ್ ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ಹೊರಹಾಕಿದೆ.

ಹರ್ಯಾಣದಲ್ಲಿ ಈ ಬಾರಿ ತಮ್ಮ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂಬ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಗೆ ಈ ಫಲಿತಾಂಶ ಶಾಕ್ ನೀಡಿದೆ. ಇದುವರೆಗೆ ಬಿಜೆಪಿ 50 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದರೆ ಕಾಂಗ್ರೆಸ್ 35 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಇತರರು 5 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ.

ಹರ್ಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವಿನತ್ತ ಸಾಗಿದೆ. ಇದರ ನಡುವೆ ಕಾಂಗ್ರೆಸ್ ನಾಯಕ ಜೈ ರಾಂ ರಮೇಶ್ ಚುನಾವಣಾ ಆಯೋಗದ ವಿರುದ್ಧ ಕಿಡಿ ಕಾರಿದ್ದಾರೆ. ಚುನಾವಣಾ ಆಯೋಗದ ವೆಬ್ ಸೈಟ್ ನಲ್ಲಿ ಫಲಿತಾಂಶ ಟ್ರೆಂಡ್ ನಿಧಾನವಾಗಿ ತೋರಿಸಲಾಗುತ್ತಿದೆ. ಸರಿಯಾಗಿ ಅಪ್ ಡೇಟ್ ಆಗುತ್ತಿಲ್ಲ. ಈ ಮೂಲಕ ಬಿಜೆಪಿ ಒತ್ತಡ ಹೇರಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಹಿಂದೆ ಲೋಕಸಭೆ ಚುನಾವಣೆ ವೇಳೆಯೂ ಈ ಪರಿಸ್ಥಿತಿಯಿತ್ತು. ನಿಜವಾಗಿ ಮತ ಎಣಿಕೆ ಆಗಿರುವುದಕ್ಕೂ ಚುನಾವಣಾ ಆಯೋಗದ ವೆಬ್ ಸೈಟ್ ನಲ್ಲಿ ತೋರಿಸುವ ಅಂಕಿ ಅಂಶಕ್ಕೂ ವ್ಯತ್ಯಾಸ ಕಾಣಿಸುತ್ತಿದೆ. 11 ನೇ ಸುತ್ತಿನ ಮತ ಎಣಿಕೆಯಾಗಿದ್ದರೂ ಚುನಾವಣಾ ಆಯೋಗದ ವೆಬ್ ಸೈಟ್ ನಲ್ಲಿ 4 ಅಥವಾ 5 ನೇ ಸುತ್ತಿನ ಮತ ಎಣಿಕೆ ಮುಗಿದಿದೆ ಎಂದು ತೋರಿಸುತ್ತಿದೆ. ಜಮ್ಮು ಕಾಶ್ಮೀರದಲ್ಲಿ ಲೈವ್ ಆಗಿ ಮತ ಎಣಿಕೆ ಅಂಕಿ ಅಂಶ ಸಿಗುತ್ತಿದೆ. ಆದರೆ ಹರ್ಯಾಣದಲ್ಲಿ ಮಾತ್ರ ನಿಧಾನವಾಗಿ ತೋರಿಸಲಾಗುತ್ತಿದೆ ಎಂದು ಜೈ ರಾಂ ರಮೇಶ್ ಆರೋಪಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸ್ಥಾನ ಕಳೆದುಕೊಳ್ಳುವ ಭಯಕ್ಕೆ ಸಿದ್ದರಾಮಯ್ಯ ಜಾತಿಗಣತಿ ಮಾಡ್ತಿದ್ದಾರೆ