Select Your Language

Notifications

webdunia
webdunia
webdunia
webdunia

ಗೋಮಾಂಸ ಸೇವನೆ ಪ್ರತಿಷ್ಠೆಯ ಸಂಕೇತವೆನ್ನುವವರನ್ನು ಗಲ್ಲಿಗೇರಿಸಿ: ಸಾಧ್ವಿ ಸರಸ್ವತಿ

ಗೋಮಾಂಸ ಸೇವನೆ ಪ್ರತಿಷ್ಠೆಯ ಸಂಕೇತವೆನ್ನುವವರನ್ನು ಗಲ್ಲಿಗೇರಿಸಿ: ಸಾಧ್ವಿ ಸರಸ್ವತಿ
ಪಣಜಿ , ಗುರುವಾರ, 15 ಜೂನ್ 2017 (13:58 IST)
ಹಸುವಿನ ವಧೆ ಮತ್ತು ಗೋಮಾಂಸ ಸೇವನೆಯ ಮೇಲೆ ಉಲ್ಬಣಗೊಂಡ ಚರ್ಚೆಯ ಮಧ್ಯೆ, ವಿವಿಧ ಹಿಂದು ಸಂಘಟನೆ ಸಭೆಯಲ್ಲಿ ಪಾಲ್ಗೊಂಡ ಸಾಧ್ವಿ ಸರಸ್ವತಿ, ಗೋಮಾಂಸ ಸೇವನೆ ಪ್ರತಿಷ್ಠೆಯ ಸಂಕೇತ ಎಂದು ಪರಿಗಣಿಸುವವರನ್ನು ಗಲ್ಲಿಗೇರಿಸಬೇಕು ಎಂದು ಗುಡುಗಿದ್ದಾರೆ.
ನಿನ್ನೆ ಸಂಜೆ ಸಾಧ್ವಿ ಸರಸ್ವತಿ ನೀಡಿದ ಹೇಳಿಕೆಗೆ ಕಾಂಗ್ರೆಸ್ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅವರ ಭಾಷಣವು ಕೋಮು ದ್ವೇಷವನ್ನು ಉಂಟುಮಾಡುವುದರಿಂದ ಗೋವಾದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿದೆ.
 
ತಮ್ಮ ಸ್ವಂತ ತಾಯಿಯ ಮಾಂಸವನ್ನು ತಿನ್ನುವುದು ಪ್ರತಿಷ್ಠೆಯ ಸಂಕೇತವೆಂದು ಪರಿಗಣಿಸುವ ಜನರನ್ನು ಗಲ್ಲಿಗೇರಿಸಬೇಕೆಂದು ಭಾರತ ಸರಕಾರಕ್ಕೆ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ. 
 
ಗೋವಾದ ರಾಮನಾಥಿ ಗ್ರಾಮದಲ್ಲಿ ಹಿಂದೂ ಸಂಘಟನೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗೋಮಾಂಸವನ್ನು ತಿನ್ನುವವರನ್ನು ಸಾರ್ವಜನಿಕರ ಮುಂದೆ ಹಾಜರುಪಡಿಸಿ ಗಲ್ಲಿಗೇರಿಸಬೇಕು, ಅಂದಾಗ ಮಾತ್ರ ಜನರು ಗೋ ಮಾತೆಯನ್ನು ರಕ್ಷಿಸುವುದು ನಮ್ಮ ಕರ್ತವ್ಯವೆಂದು ಭಾವಿಸುವುದಾಗಿ ತಿಳಿಸಿದ್ದಾರೆ.
 
ಮಧ್ಯ ಪ್ರದೇಶದ ಛಿಂಡವಾಡಾ ನಗರದಲ್ಲಿರುವ ಸನಾತನ ಧರ್ಮಾ ಪ್ರಚಾರ ಸೇವಾ ಸಮಿತಿಯ ಅಧ್ಯಕ್ಷೆಯಾದ ಸಾಧ್ವಿ ಸರಸ್ವತಿ ಹಿಂದುಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ತಮ್ಮ ತಮ್ಮ ಮನೆಗಳಲ್ಲಿ ಶಸ್ತ್ರಾಸ್ತ್ರಗಳನ್ನು ಇರಿಸಿಕೊಳ್ಳಬೇಕು. ನಾವು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸದಿದ್ದರೆ ಭವಿಷ್ಯದಲ್ಲಿ ನಾವು ನಾಶವಾಗುತ್ತೇವೆ ಎಂದು ಸಾಧ್ವಿ ಸರಸ್ವತಿ ಸಲಹೆ ನೀಡಿದ್ದಾರೆ. 

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಈರುಳ್ಳಿ ಹಾಕಿದ ಊಟ ನೀಡಿದ್ದಕ್ಕೆ ಈತ ಮಾಡಿದ್ದೇನು ಗೊತ್ತಾ?!