ಮದುವೆಗೆ ಕೆಲವೇ ಗಂಟೆಗಳ ಮೊದಲು ತಂದೆಯಿಂದಲೇ ಹತ್ಯೆಯಾದ ಜಿಮ್ ಟ್ರೈನರ್

Krishnaveni K
ಶುಕ್ರವಾರ, 8 ಮಾರ್ಚ್ 2024 (09:57 IST)
ನವದೆಹಲಿ: ಇನ್ನೇನು ಮದುವೆಗೆ ಕೆಲವೇ ಕ್ಷಣಗಳು ಬಾಕಿಯಿದೆ ಎನ್ನುವಾಗ ವೃತ್ತಿಯಲ್ಲಿ ಜಿಮ್ ಟ್ರೈನರ್ ಆಗಿದ್ದ ಮಗನನ್ನು ತಂದೆಯೇ ಹತ್ಯೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ. ಈ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ.

ಮದುವೆಯ ದಿಬ್ಬಣ ಹೊರಡಲು ಸಿದ್ಧತೆಯಲ್ಲಿದ್ದ ಮಗನನ್ನು ತಂದೆಯೇ ಹಲವು ಬಾರಿ ಇರಿದಿದ್ದರಿಂದ ತೀವ್ರ ಗಾಯಗೊಂಡ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. 29 ವರ್ಷದ ಗೌರವ್ ಸಿಂಘಾಲ್ ಮೃತಪಟ್ಟ ವ್ಯಕ್ತಿ. ಕೃತ್ಯವೆಸಗಿದ ಬಳಿಕ ತಂದೆಯೇ ಮಗನ ಮೃತದೇಹವನ್ನು ಎಳೆದುಕೊಂಡು ಕೊಠಡಿಯೊಂದರಲ್ಲಿ ಹಾಕಿದ್ದ. ಆ ಮೂಲಕ ತನ್ನ ಕೃತ್ಯ ತಕ್ಷಣವೇ ಯಾರಿಗೂ ತಿಳಿಯದಂತೆ ನೋಡಿಕೊಳ್ಳಲು ಪ್ರಯತ್ನಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ತಂದೆ ಮತ್ತು ಮಗನ ನಡುವೆ ಉತ್ತಮ ಬಾಂಧವ್ಯವಿರಲಿಲ್ಲ. ಮಗನ ಮೇಲಿನ ವೈಮನಸ್ಯದಿಂದಾಗಿ ಈ ಕೃತ್ಯವೆಸಗಸಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಆ ಸಂದರ್ಭದಲ್ಲಿ ಕೊಲೆ ಮಾಡುವಂತಹ ಕಾರಣ ಏನಾಗಿತ್ತು ಎಂದು ಇನ್ನೂ ತನಿಖೆಯಿಂದ ಗೊತ್ತಾಗಬೇಕಿದೆ.

ಆದರೆ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿರುವ ತಂದೆ ತನಗೆ ಮಗನನ್ನು ಕೊಂದಿದ್ದಕ್ಕೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಹೇಳಿಕೊಂಡಿದ್ದಾನೆ. ಇದೀಗ ಆರೋಪಿ ಜೊತೆಗೆ ಆತನ ಕುಟುಂಬಸ್ಥರನ್ನೂ ಪೊಲೀಸರು ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ. ಮೃತ ಗೌರವ್ ಮದುವೆ ಗುರುವಾರ ನಿಗದಿಯಾಗಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದಲಿತ ಸಂಘಟನೆಗಳಿಗೆ ನಂದೇ ಪ್ರಾಯೋಜಕತ್ವ ಏನಿವಾಗ ಎಂದ ಪ್ರಿಯಾಂಕ್ ಖರ್ಗೆ: ಇಲ್ಲಿದ್ರೆ ಸಸ್ಪೆಂಡ್ ಇಲ್ವಾ ಎಂದ ನೆಟ್ಟಿಗರು

Video: ದೀಪಾವಳಿ ಬೋನಸ್ ಬದಲು ಸೋನ್ ಪಾಪ್ಡಿ ಕೊಟ್ಟ ಬಾಸ್: ನೌಕರರು ಮಾಡಿದ್ದೇನು

Video: ಇರುಮುಡಿ ಹೊತ್ತು ಶಬರಿಮಲೆ 18 ಮೆಟ್ಟಿಲು ಹತ್ತಿದ ರಾಷ್ಟ್ರಪತಿ ದ್ರೌಪದಿ ಮುರ್ಮು: ಹೊಸ ದಾಖಲೆ

ಆರ್ ಎಸ್ಎಸ್ ನಲ್ಲಿದ್ದ ಅಶೋಕ್ ರೈ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದು ಯಾಕೆ: ಅವರೇ ಹೇಳಿದ್ದು ಹೀಗೆ

ಅಪ್ಪ ಅನಂತ್ ಕುಮಾರ್ ಸುದ್ದಿಗೆ ಬಂದಿದ್ದಕ್ಕೆ ಪ್ರಿಯಾಂಕ್ ಖರ್ಗೆಗೆ ಬೆಂಡೆತ್ತಿದ ಪುತ್ರಿ ಐಶ್ವರ್ಯಾ

ಮುಂದಿನ ಸುದ್ದಿ
Show comments