Select Your Language

Notifications

webdunia
webdunia
webdunia
webdunia

ಒಂಭತ್ತು ವರ್ಷದ ಬಾಲಕಿಗೆ ಕಾಮುಕರು ಇದೆಂಥಾ ಸ್ಥಿತಿ ತಂದಿಟ್ಟರು

crime

Krishnaveni K

ಪುದುಚೇರಿ , ಬುಧವಾರ, 6 ಮಾರ್ಚ್ 2024 (14:00 IST)
ಪುದುಚೇರಿ: ನಾಲ್ಕು ದಿನಗಳ ಮೊದಲು ನಾಪತ್ತೆಯಾಗಿದ್ದ ಪುದುಚೇರಿಯ ಒಂಭತ್ತು ವರ್ಷದ ಬಾಲಕಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಶಾಕ್ ಗೊಳಗಾಗುವಂತೆ ಮಾಡಿದೆ.

ಬಾಲಕಿ ಮುತ್ತಿಯಾಲ್ಪೇಟೆಯ ಸರ್ಕಾರಿ ಶಾಲೆಯಲ್ಲಿ ಐದನೇ ತರಗತಿ ಓದುತ್ತಿದ್ದಳು. ಮಾರ್ಚ್ 2 ರಂದು ಬಾಲಕಿ ಮನೆಗೆ ಬಂದಿಲ್ಲ ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಬಾಲಕಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಕೆಯ ಮನೆಯ ಸಮೀಪದ ಚರಂಡಿಯೊಂದರಲ್ಲಿ ಮೃತದೇಹ ಪತ್ತೆಯಾಗಿದೆ.

ಈ ಸಂಬಂಧ ಮೂವರು ಅಪ್ರಾಪ್ತರು ಸೇರಿದಂತೆ ಏಳು ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಾಯುವ ಮೊದಲು ಬಾಲಕಿ ಮೇಲೆ ಈ ಕಾಮುಕರು ಅತ್ಯಾಚಾರವೆಸಗಿದ್ದರು. ಅತ್ಯಾಚಾರವೆಸಗುವಾಗಲೇ ಬಾಲಕಿ ಮೃತಪಟ್ಟಿದ್ದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ.

ಮಗು ಪತ್ತೆಯಾಗದ ಕಾರಣ ಆಕ್ರೋಶಗೊಂಡಿದ್ದ ಪೋಷಕರು ಮತ್ತು ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಇದೀಗ ಆಕೆಯ ಮನೆಯ ಸಮೀಪವೇ ಚರಂಡಿಯೊಂದರಲ್ಲಿ ಗೋಣಿ ಚೀಲವೊಂದು ತೇಲಾಡುತ್ತಿದ್ದುದು ನೋಡಿ ಸಂಶಯಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪರಿಶೀಲಿಸಿದಾಗ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಆಕೆಯ ಕೈ ಮತ್ತು ಕಾಲುಗಳು ಕಟ್ಟಿದ ಸ್ಥಿತಿಯಲ್ಲಿತ್ತು. ಇದೀಗ ಮೃತದೇಹವನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಲಾಗಿದೆ. ಈ ಭೀಕರ ಅತ್ಯಾಚಾರ ಮತ್ತು ಹತ್ಯೆ ನೋಡಿ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲೂ ಮಗುವಿಗೆ ನ್ಯಾಯ ಕೊಡಿಸಿ ಎಂದು ಆಗ್ರಹ ಕೇಳಿಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಫಸ್ಟ್ ನೈಟ್ ದಿನದಿಂದಲೇ ಗಂಡು ಮಗುವಿಗಾಗಿ ಅತ್ತೆ-ಮಾವನಿಂದ ಕಿರುಕುಳ ಶುರು