ಕ್ಯಾಲಿಫೋರ್ನಿಯಾದಲ್ಲಿ ಬಂದೂಕು ದಾಳಿ

Webdunia
ಮಂಗಳವಾರ, 17 ಜನವರಿ 2023 (17:39 IST)
ಇಲ್ಲಿನ ತುಲಾರೆ ಕೌಂಟಿಯ ಮನೆಯೊಂದಕ್ಕೆ ನುಗ್ಗಿದ ಇಬ್ಬರು ಬಂದೂಕುಧಾರಿಗಳು, 17 ವರ್ಷದ ತಾಯಿ ಮತ್ತು ಅವರ 6 ತಿಂಗಳ ಮಗು ಸೇರಿದಂತೆ ಮನೆಯಲ್ಲಿದ್ದ ಆರು ಜನರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಗುಂಡಿನ ಸದ್ದು ಕೇಳಿದ ಸ್ಥಳೀಯರೊಬ್ಬರು ನಮಗೆ ದೂರು ನೀಡಿದ್ದರು. ಸೋಮವಾರ ಮುಂಜಾನೆ 4 ಗಂಟೆಗೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿದಾಗ ತನ್ನ ತೋಳಿನಲ್ಲಿ ಮಗು ಎತ್ತಿಕೊಂಡಿದ್ದ ತಾಯಿಯನ್ನು ಹತ್ಯೆ ಮಾಡಿ ಮನೆಯ ಹೊರಗೆ ಶವ ಎಸೆಯಲಾಗಿತ್ತು. ಇಬ್ಬರ ತಲೆಗೂ ಗುಂಡೇಟು ತಗುಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಾಯಿ, ಮಗುವಿನ ಶವ ಮನೆಯ ಬಾಗಿಲಿನಲ್ಲಿತ್ತು. ಮಹಿಳೆ ಸೇರಿದಂತೆ ಇನ್ನೂ ಮೂವರು ಮನೆಯ ಒಳಗಿದ್ದರು. ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಬ್ಬರು ಮಾತ್ರ ಆಸ್ಪತ್ರೆಗೆ ಕರೆದೊಯ್ದ ನಂತರ ಸಾವಿಗೀಡಾಗಿದ್ದಾರೆ. ಇದು ವ್ಯವಸ್ಥಿತವಾದ ದಾಳಿಯಂತೆ ಕಾಣುತ್ತಿದೆ. ವೈಯಕ್ತಿಕ ದ್ವೇಷವಿರಬಹುದು. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಕುರ್ಚಿ ಗುದ್ದಾಟಕ್ಕೆ ಬ್ರೇಕ್ ಬೆನ್ನಲ್ಲೇ ಡಿಕೆ ಸಂಪುಟದಲ್ಲಿ ಮಂತ್ರಿಯಾಗಲ್ಲ ಎಂದ ರಾಜಣ್ಣ

ನಮ್ಮ ಪಕ್ಷಕ್ಕೆ ದುಡ್ಡು ಕೊಡದೇ ಇನ್ಯಾರಿಗೆ ಕೊಡೋಣ: ಡಿ.ಕೆ. ಶಿವಕುಮಾರ್ ಪ್ರಶ್ನೆ

ವಾಚ್ ಬಗ್ಗೆ ಪ್ರಶ್ನಿಸುವವರು ಐಟಿ ಇಲಾಖೆಯಿಂದ ಏಕೆ ತನಿಖೆ ನಡೆಸಬಾರದು

ಪರಪ್ಪನ ಅಗ್ರಹಾರ ಕೈದಿಗಳ ಚಟ ತೀರಿಸಲು ಹೋಗಿ ಅರೆಸ್ಟ್ ಆದ ವಾರ್ಡನ್

Delhi Air Pollution, ರೇಖಾ ಗುಪ್ತಾ ಈ ಬಗ್ಗೆ ಮಹತ್ವದ ಹೇಳಿಕೆ

ಮುಂದಿನ ಸುದ್ದಿ
Show comments