Select Your Language

Notifications

webdunia
webdunia
webdunia
webdunia

ಗುಜರಾತ್ ಶಾಸಕರು ಮರಳಿ ತವರಿಗೆ

ಗುಜರಾತ್ ಶಾಸಕರು ಮರಳಿ ತವರಿಗೆ
Bangalore , ಸೋಮವಾರ, 7 ಆಗಸ್ಟ್ 2017 (09:07 IST)
ಬೆಂಗಳೂರು:  ಆಪರೇಷನ್ ಕಮಲ ಭೀತಿಯಿಂದ ಬೆಂಗಳೂರಿನ ಈಗಲ್ಟನ್ ರೆಸಾರ್ಟ್ ನಲ್ಲಿ ಬೀಡುಬಿಟ್ಟಿದ್ದ ಗುಜರಾತ್ ಶಾಸಕರು ತಡರಾತ್ರಿ ತವರಿಗೆ ಮರಳಿದ್ದಾರೆ.

 
ತಡರಾತ್ರಿ ಬಸ್ ನಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಿದ ಶಾಸಕರು ಗುಜರಾತ್ ಗೆ ತೆರಳಿದ್ದಾರೆ. ಶಾಸಕರೆಲ್ಲರೂ ನೇರವಾಗಿ ಅಹಮ್ಮದಾಬದ್ ಗೇ ತೆರಳಿದ್ದಾರೆ. ವಿಮಾನ ನಿಲ್ದಾಣದವರೆಗೆ ಗುಜರಾತ್ ಶಾಸಕರ ಜತೆಗೆ ತೆರಳಿ ಸ್ವತಃ ಸಚಿವ ಡಿಕೆ ಶಿವಕುಮಾರ್ ಇವರನ್ನು ಬೀಳ್ಕೊಟ್ಟರು. ಶಾಸಕರು ಈ ಮೊದಲು ಸುದ್ದಿಯಾದಂತೆ ದೆಹಲಿಗೆ  ಹೋಗಿ ವರಿಷ್ಠೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗುತ್ತಿಲ್ಲ.

ನಾಳೆ ಗುಜರಾತ್ ರಾಜ್ಯ ಸಭೆ ಚುನಾವಣೆ ನಡೆಯಲಿದ್ದು, ಸೋನಿಯಾ ಆಪ್ತ ಕಾರ್ಯದರ್ಶಿ ಅಹಮ್ಮದ್ ಪಟೇಲ್ ಗೆಲ್ಲಿಸಲು ಕಾಂಗ್ರೆಸ್ ಶತಾಯ ಗತಾಯ ಪ್ರಯತ್ನ ನಡೆಸುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಡಿಕೆಶಿಗೆ ಇದೀಗ ಐಟಿ ಇನ್ನೊಂದು ಶಾಕ್