Select Your Language

Notifications

webdunia
webdunia
webdunia
webdunia

ಸಚಿವ ಡಿಕೆಶಿಗೆ ಇದೀಗ ಐಟಿ ಇನ್ನೊಂದು ಶಾಕ್

ಡಿಕೆ ಶಿವಕುಮಾರ್
ಬೆಂಗಳೂರು: ಇಂಧನ ಸಚಿವ ಡಿಕೆ ಶಿವಕುಮಾರ್ ಮತ್ತು ಆಪ್ತರ ಮನೆ ಮೇಲೆ ರೇಡ್ ನಡೆಸಿದ್ದ ಐಟಿ ಅಧಿಕಾರಿಗಳು ಇದೀಗ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ.

 
ಬರೋಬ್ಬರಿ ನಾಲ್ಕು ದಿನಗಳ ಕಾಲ ಡಿಕೆಶಿವಕುಮಾರ್ ನಿವಾಸ, ಮಾವನ ಮನೆ, ಆಪ್ತ ಜ್ಯೋತಿಷಿ ಮನೆಯಲ್ಲಿ ತಪಾಸಣೆ  ನಡೆಸಿದ್ದ ಅಧಿಕಾರಿಗಳು ಭಾರೀ ಪ್ರಮಾಣದಲ್ಲಿ ದಾಖಲೆ ವಶಪಡಿಸಿಕೊಂಡಿದ್ದರು.

ಆದರೆ ಮುಂದಿನ ಎರಡು ದಿನಗಳ ಕಾಲ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಸಚಿವರು ಐಟಿ ಇಲಾಖೆಗೆ ತಿಳಿಸಿದ್ದಾರೆ ಎನ್ನಲಾಗಿದೆ. ಕಾನೂನಿಗೆ ಎಲ್ಲರೂ ತಲೆಬಾಗಲೇ ಬೇಕು. ಹೀಗಾಗಿ ಸಮನ್ಸ್ ನೀಡಿರುವ ಅಧಿಕಾರಿಗಳ ವಿಚಾರಣೆಗೆ ಹಾಜರಾಗುವುದಾಗಿ ಸಚಿವರು ತಿಳಿಸಿದ್ದಾರೆ.

ಅಪಾರ ಪ್ರಮಾಣದ ಆಸ್ತಿ ಪಾಸ್ತಿ ದೊರೆತ ಹಿನ್ನಲೆಯಲ್ಲಿ ಐಟಿ ಇಲಾಖೆ ಜಾರಿ  ನಿರ್ದೇಶನಾಲಯಕ್ಕೆ ಪತ್ರ ಬರೆಯುವ ಸಾಧ್ಯತೆಯಿದೆ. ಹೀಗಾಗದರೆ ಡಿಕೆಶಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ.

ಇದನ್ನೂ ಓದಿ.. ಮಾತು ಕೇಳದ ಗಂಗೂಲಿ ಮೇಲೆ ಸಿಟ್ಟಿಗೆದ್ದಿದ್ದರೇ  ಸಚಿನ್?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿಗೆ ಬಳೆ ಕಳುಹಿಸಿಕೊಟ್ಟ ‘ಕೈ’ ಮಹಿಳೆಯರು