ಅಹಮದಾಬಾದ್: ಗುಜರಾತ್‌ನಲ್ಲಿ ಇದೀಗ ಮತ್ತೊಂದು ಭೀಕರ ಸೇತುವೆ ಕುಸಿತ ಪ್ರಕರಣ ರಾಜ್ಯವನ್ನೇ ತಲ್ಲಣಗೊಳಿಸಿದೆ.
ವಡೋದರಾ ಜಿಲ್ಲೆಯ 40 ವರ್ಷ ಹಳೆಯದಾದ ಗಂಭೀರ ಸೇತುವೆ ಬುಧವಾರ ಮುಂಜಾನೆ ಮುರಿದು ಬಿದ್ದ ಪರಿಣಾಮ, 10 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ವಡೋದರಾ ಜಿಲ್ಲೆಯ ಪದ್ರಾ ತಾಲೂಕಿನ ಮೂಲಕ ಮಧ್ಯ ಗುಜರಾತ್‌ನಿಂದ ಸೌರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಗಂಭೀರ ಸೇತುವೆ ಮುಜ್‌ಪುರ್ ನಜೀರ್‌ನಲ್ಲಿ ಬುಧವಾರ ಮುಂಜಾನೆ ಕುಸಿದಿದೆ. ವರ್ಷಗಳ ಕಾಲ ಶಿಥಿಲಾವಸ್ಥೆಯಲ್ಲಿದ್ದ ಸೇತುವೆಯು ಅಂತಿಮವಾಗಿ ಎರಡು ಟ್ರಕ್‌ಗಳು, ಪಿಕಪ್ ವ್ಯಾನ್, ಒಂದು ಆಟೋ-ರಿಕ್ಷಾ ಮತ್ತು ಇಕೋ ಕಾರು ಸೇತುವೆ ಮುರಿತದ ವೇಳೆ ನದಿಗೆ ಬಿದ್ದಿದೆ.
ರಕ್ಷಣಾ ತಂಡಗಳು ಒಂಬತ್ತು ಮೃತದೇಹಗಳನ್ನು ಹೊರತೆಗೆದಿದ್ದು, ಒಂಬತ್ತು ಮಂದಿಯನ್ನು ಜೀವಂತವಾಗಿ ರಕ್ಷಿಸಲಾಗಿದೆ. ಇದೀಗ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. 40ವರ್ಷದ ಹಳೆಯದಾದ ಸೇತುವೆಯನ್ನು ದುರಸ್ತಿ ಮಾಡದೆ ಬೇಜವಾಬ್ದಾರಿ ತೋರಿದ್ದೆ ಈ ಅವಘಟಕ್ಕೆ ಕಾರಣ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.