Select Your Language

Notifications

webdunia
webdunia
webdunia
webdunia

ಕಂಠಪೂರ್ತಿ ಕುಡಿದಿದ್ದ ವರ ಮದುವೆ ಮೆರವಣಿಗೆಯಲ್ಲೇ ಮೃತಪಟ್ಟ..!

ಕಂಠಪೂರ್ತಿ ಕುಡಿದಿದ್ದ ವರ ಮದುವೆ ಮೆರವಣಿಗೆಯಲ್ಲೇ ಮೃತಪಟ್ಟ..!
ಬೆಂಗಳೂರು , ಶುಕ್ರವಾರ, 12 ಮೇ 2017 (15:45 IST)
ಕಂಠಪೂರ್ತಿ ಕುಡಿದಿದ್ದ ವರ ಮದುವೆಯ ಮೆರವಣಿಗೆ ವೇಳೆ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಗುಜರಾತ್`ನ ಬೊರ್ಸಾದ್ ನಗರದಲ್ಲಿ ನಡೆದಿದೆ.

ಮಂಗಳವಾರ ರಾತ್ರಿ ಮದುವೆಯ ಸಂಭ್ರಮದ ಮೆರವಣಿಗೆ ನಡೆಯುತ್ತಿತ್ತು. ಸ್ನೇಹಿತನ ಹೆಗಲ ಮೇಲೆ ಕುಳಿತು ಸ್ನೇಹಿತರು ಮತ್ತು ಕುಟುಂಬ ವರ್ಗದವರ ಜೊತೆ ಕುಣಿಯುತ್ತಾ ನಲಿಯುತ್ತಾ ಬರುತ್ತಿದ್ದ ವರ ಹೃದಯಾಘಾತದಿಂದ ಕುಸಿದಿದ್ದಾನೆ. ಬಳಿಕ ವರನನ್ನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಾರ್ಗ ಮಧ್ಯೆಯೇ ಪ್ರಾಣ ಪಕ್ಷಿ ಹಾರಿಹೋಗಿತ್ತು. ಮೃತ ವರನನ್ನ 25 ವರ್ಷದ ಸಾಗರ್ ಸೋಲಂಕಿ ಎಂದು ಗುರ್ತಿಸಲಾಗಿದೆ.

ಘಟನೆಯಿಂದಾಗಿ ವರ ಮತ್ತು ವಧುವಿನ ಎರಡೂ ಕುಟುಂಬಗಳಿಗೂ ಆಘಾತವಾಗಿದ್ದು, ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ವರ ಸಾಗರ್ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದು, ಅತಿಯಾದ ಮದ್ಯಪಾನ ಮಾಡಿದ್ದೇ ಘಟನೆಗೆ ಕಾರಣ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ


Share this Story:

Follow Webdunia kannada

ಮುಂದಿನ ಸುದ್ದಿ

ಎಸ್ಸೆಎಸ್ಸೆಎಲ್ಸಿ ಫಲಿತಾಂಶ ಪ್ರಕಟ: 60 ಶಾಲೆಗಳಲ್ಲಿ ಶೂನ್ಯ ಫಲಿತಾಂಶ