Select Your Language

Notifications

webdunia
webdunia
webdunia
webdunia

ಎಸ್ಸೆಎಸ್ಸೆಎಲ್ಸಿ ಫಲಿತಾಂಶ ಪ್ರಕಟ: 60 ಶಾಲೆಗಳಲ್ಲಿ ಶೂನ್ಯ ಫಲಿತಾಂಶ

ಎಸ್ಸೆಎಸ್ಸೆಎಲ್ಸಿ ಫಲಿತಾಂಶ ಪ್ರಕಟ: 60 ಶಾಲೆಗಳಲ್ಲಿ ಶೂನ್ಯ ಫಲಿತಾಂಶ
ಬೆಂಗಳೂರು , ಶುಕ್ರವಾರ, 12 ಮೇ 2017 (14:41 IST)
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ  ಪ್ರಕಟಗೊಂಡಿದೆ. ಮಧ್ಯಾಹ್ನವೇ ಪ್ರೌಢಶಿಕ್ಷಣಾ ಇಲಾಖೆಯ ವೆಬ್ ಸೈಟ್`ನಲ್ಲಿ ಫಲಿತಾಂಶ ಪ್ರಕಟಿಸಲಾಗಿದೆ. ಈ ಬಾರಿ 5,81,134 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.67.87ರಷ್ಟು ಫಲಿತಾಂಶ ಬಂದಿದೆ. ಆದರೆ, ಕಳೆದ ಬಾರಿಗಿಂತ ಶೆ.7.24ರಷ್ಟು ಫಲಿತಾಂಶ ಕುಸಿತ ಕಂಡಿದೆ.

ಈ ವರ್ಷವೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, 2,96,426 ಬಾಲಕಿಯರು ಮತ್ತು 2,84,708 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ.84.23ರಷ್ಟು ಫಲಿತಾಂಶ ಪಡೆದಿರುವ ಉಡುಪಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ. 82.38 ರಷ್ಟು ಫಲಿತಾಂಶ ಪಡೆದಿರುವ ದಕ್ಷಿಣ ಕನ್ನಡ 2ನೇ ಸ್ಥಾನ ಮತ್ತು ಚಿಕ್ಕೋಡಿ 3ನೇ ಸ್ಥಾನದಲ್ಲಿದ್ದರೆ, ಬೀದರ್ ಕೊನೆಯ ಸ್ಥಾನದಲ್ಲಿದೆ.
ಇವತ್ತು karresults.nic.in ಮತ್ತು sslc.kar.nic.in ವೆಬ್ ಸೈಟ್`ಗಳಲ್ಲಿ ಫಲಿತಾಂಶ ಪ್ರಕಟವಾಗಿದ್ದು, ನಾಳೆ ಆಯಾ ಶಾಲೆಗಳಲ್ಲಿ ಫಲಿತಾಂಶ ಪ್ರಕಟಿಸಲಾಗುತ್ತೆ. 924 ಶಾಲೆಗಳಲ್ಲಿ ಶೇ. 100ರಷ್ಟು ಫಲಿತಾಂಶ ಬಂದಿದ್ದರೆ 60 ಶಾಲೆಗಳಲ್ಲಿ ಶೂನ್ಯ ಫಲಿತಯಾಂಶ ಬಂದಿದದ್ದು, ಇದರಲ್ಲಿ 51 ಖಾಸಗಿ ಶಾಲೆಗಳಿವೆ..

ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಗ್ರಾಮೀಣ ವಿದ್ಯಾರ್ಥಿಗಳೇ ಮುಂದಿದ್ದಾರೆ. 3,17, 570 ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ನಗರ ಪ್ರದೇಶದಲ್ಲಿ 2,42,869 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
ಜೂನ್ 15ರಿಂದ 22ರವರೆಗೆ ಪೂರಕ ಪರೀಕ್ಷೆ ನಡೆಯಲಿದೆ. ಮರು ಎಣಿಕೆ ಮತ್ತು ಉತ್ತರ ಪತ್ರಿಕೆ ಪ್ರತಿ ಪಡೆಯಲು ಅರ್ಜಿ ಸಲ್ಲಿಸಲು ಮೇ 22 ಕೊನೆಯ ದಿನವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾದ ಸಿದ್ಧಗಂಗಾ ಶ್ರೀಗಳು