Select Your Language

Notifications

webdunia
webdunia
webdunia
webdunia

ರಾಷ್ಟ್ರ ರಾಜಧಾನಿಯಲ್ಲೂ ಗೃಹಲಕ್ಷ್ಮೀ ಮಾದರಿ ಯೋಜನೆ: ಮಹಿಳೆಯರ ಖಾತೆಗೆ ಮಾಸಿಕ ₹2,500 ಜಮೆ

Delhi Assembly Elections

Sampriya

ನವದೆಹಲಿ , ಮಂಗಳವಾರ, 25 ಮಾರ್ಚ್ 2025 (14:14 IST)
Photo Courtesy X
ನವದೆಹಲಿ: ದೆಹಲಿ ವಿಧಾನಸಭೆಯ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಘೋಷಿಸಿದಂತೆ ಮಹಿಳೆಯರ ಖಾತೆಗೆ ಹಣ ಜಮೆ ಮಾಡುವ ಯೋಜನೆಯನ್ನು ರೇಖಾ ಗುಪ್ತಾ ಸಾರಥ್ಯದ ಸರ್ಕಾರ ಕೊನೆಗೂ ಘೋಷಣೆ ಮಾಡಿದೆ.

ಕಳೆದ ತಿಂಗಳ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದ ನಂತರ, 26 ವರ್ಷಗಳ ನಂತರ ದೆಹಲಿಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಮಂಡಿಸುತ್ತಿರುವ ಮೊದಲ ಬಜೆಟ್ ಇದಾಗಿದೆ.

ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮಂಗಳವಾರ ಒಂದು ಲಕ್ಷ ಕೋಟಿ ರೂಪಾಯಿ ಮೌಲ್ಯದ ಬಜೆಟ್ ಮಂಡಿಸಿದ್ದಾರೆ. ಹಿಂದಿನ ವರ್ಷಕ್ಕಿಂತ ಶೇ 31.5ರಷ್ಟು ಹೆಚ್ಚಳವಾಗಿದೆ. ಹಣಕಾಸು ಖಾತೆಯನ್ನೂ ರೇಖಾ ಹೊಂದಿದ್ದಾರೆ.

ಅರ್ಹ ಮಹಿಳೆಯರಿಗೆ ಮಾಸಿಕ ₹2,500 ಹಣ ಜಮೆ ಮಾಡಲು ₹5,100 ಕೋಟಿ ಮೀಸಲಿಡಲಾಗಿದೆ. ಹೆಚ್ಚುವರಿಯಾಗಿ, ರಾಜಧಾನಿಯಲ್ಲಿ ಆರೋಗ್ಯ ಸೇವೆಗಳನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಗೆ ₹2,144 ಕೋಟಿ ಹಂಚಿಕೆ ಮಾಡಲಾಗಿದೆ.

ವಿದ್ಯುತ್, ರಸ್ತೆಗಳು, ನೀರು ಮತ್ತು ಸಂಪರ್ಕ ಸೇರಿದಂತೆ ಹತ್ತು ಪ್ರಮುಖ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಿದೆ. ದೆಹಲಿ-ಎನ್‌ಸಿಆರ್ ಒಳಗೆ ಸುಧಾರಿತ ಸಾರಿಗೆ ಸಂಪರ್ಕಗಳಿಗಾಗಿ ದೆಹಲಿ ಸರ್ಕಾರ ₹1,000 ಕೋಟಿಯನ್ನು ನಿಗದಿಪಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Honeytrap: ಪರ್ಸನಲ್ ಆಗಿ ಮಾತನಾಡಬೇಕು ಅಂತ ಬಂದವಳು ಸಚಿವ ಕೆಎನ್ ರಾಜಣ್ಣನನ್ನು ಕೇಳಿದ್ದೇನು