ನವದೆಹಲಿ: ದೇಶದ ಪ್ರಮುಖ ಎರಡು ಯಾತ್ರಾ ಸ್ಥಳಗಳಾಗಿರುವ ತಿರುಪತಿ ಹಾಗೂ ಶಿರಡಿಗೆ ಸಂಪರ್ಕಿಸುವ ಎಕ್ಸ್‌ಪ್ರೆಸ್‌ಗೆ ಕೇಂದ್ರ ಸಚಿವ ವಿ.ಸೋಮಣ್ಣ ಹಸಿರು ನಿಶಾನೆ ತೋರಿದ್ದಾರೆ.
ಇನ್ನೂ ತಿರುಪತಿ-ಸಾಯಿನಗರ ಶಿರಡಿ ಎಕ್ಸ್‌ಪ್ರೆಸ್ ಆರಂಭವು ನಾಲ್ಕು ರಾಜ್ಯಗಳ ಭಕ್ತರಿಗೆ ಐತಿಹಾಸಿಕ ದಿನವಾಗಿದೆ ಎಂದು ವಿ.ಸೋಮಣ್ಣ ಬಣ್ಣಿಸಿದ್ದಾರೆ. ಇದು ದೇಶದ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.
ತಿರುಪತಿ-ಸಾಯಿನಗರ ಶಿರಡಿ ಎಕ್ಸ್‌ಪ್ರೆಸ್ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ಮಹಾರಾಷ್ಟ್ರ ಎಂಬ ನಾಲ್ಕು ರಾಜ್ಯಗಳಲ್ಲಿ ರೈಲು ಸಂಪರ್ಕವನ್ನು ಬಲಪಡಿಸುವ ಮೂಲಕ ಬಹು ದೂರಗಾಮಿ ಪ್ರಯೋಜನಗಳನ್ನು ನೀಡುತ್ತದೆ.
ಇದು ಆಂಧ್ರಪ್ರದೇಶದ ದಕ್ಷಿಣ ಕರಾವಳಿ ಪಟ್ಟಿಯಿಂದ ಭಕ್ತರಿಗಾಗಿ ಶಿರಡಿಗೆ ಮೊದಲ ನೇರ ರೈಲು ಸೇವೆಯನ್ನು ನೀಡಲಿದೆ. ಈ ಮೂಲಕ ತಿರುಪತಿ ಹಾಗೂ ಶಿರಡಿಯನ್ನು ನೇರವಾಗಿ ಸಂಪರ್ಕಿಸಬಹುದು.
ಎಕ್ಸ್‌ಪ್ರೆಸ್ ರೈಲುಗೆ ಹಸಿರು ನಿಶಾನೆ ತೋರಿಸುವ ಮೂಲಕ ರೈಲು ತೀರ್ಥಯಾತ್ರೆ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ಮಾರ್ಗದಲ್ಲಿ ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸುತ್ತದೆ. ಪ್ರಾದೇಶಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಅದಲ್ಲದೆ ದೇವಸ್ಥಾನಕ್ಕೆ ಪ್ರಯಾಣ ಬೆಳೆಸುವ ಯೋಜನೆಯಲ್ಲಿರುವವರಿಗೆ ತುಂಬಾನೇ ಸಹಕಾರಿಯಾಗಲಿದೆ. ಹೊಸ ಸಾಪ್ತಾಹಿಕ ರೈಲು ಯಾತ್ರಿಕರಿಗೆ ಪ್ರತಿ ಮಾರ್ಗಕ್ಕೆ ಸುಮಾರು 30 ಗಂಟೆಗಳ ಪ್ರಯಾಣದ ಸಮಯದೊಂದಿಗೆ ಸುಗಮ ಪ್ರಯಾಣವನ್ನು ನೀಡುತ್ತದೆ.