Select Your Language

Notifications

webdunia
webdunia
webdunia
webdunia

ರದ್ದಾಗಲಿದೆ 5ರಿಂದ 8ನೇ ತರಗತಿ ವರೆಗಿನ ಕಡ್ಡಾಯ ಉತ್ತೀರ್ಣ ನೀತಿ

ರದ್ದಾಗಲಿದೆ 5ರಿಂದ 8ನೇ ತರಗತಿ ವರೆಗಿನ ಕಡ್ಡಾಯ ಉತ್ತೀರ್ಣ ನೀತಿ
ನವದೆಹಲಿ , ಶನಿವಾರ, 22 ಜುಲೈ 2017 (12:58 IST)
ನವದೆಹಲಿ: ಇನ್ಮುಂದೆ 5ರಿಂದ 8ನೇ ತರಗತಿ ವರೆಗೆ ವಿದ್ಯಾರ್ಥಿಗಳನ್ನು ಕಡ್ಡಾಯ ಉತ್ತೀರ್ಣ ಮಾಡುವ ನೀತಿಯನ್ನು ರದ್ದುಗೊಳಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಈ ಕುರಿತು ಲೋಕಸಭೆಗೆ ಮಾಹಿತಿ ನೀಡಿದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವ್ಡೇಕರ್ ಅವರು, ನೋ ಡಿಟೆನ್ಶನ್ ಪಾಲಿಸಿಯಿಂದ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ ಎಂದು ಹಲವು ರಾಜ್ಯಗಳು  ಆತಂಕ ವ್ಯಕ್ತಪಡಿಸಿವೆ. ಹೀಗಾಗಿ ತಿದ್ದುಪಡಿ ಮಸೂದೆ ಮಂಡಿಸಲಾಗುವುದು ಎಂಬ ಸುಳಿವು ನೀಡಿದ್ದಾರೆ.
 
ಹೀಗಾಗಿ ಇನ್ಮುಂದೆ 5 ರಿಂದ 8 ನೇ ತರಗತಿ ವರೆಗೆ ಮಕ್ಕಳು ಫೇಲ್ ಆದರೂ ಪಾಸ್ ಮಾಡುವಂತಿಲ್ಲ. 5ರಿಂದ 8ನೇ ತರಗತಿ ಮಕ್ಕಳು ಮಾರ್ಚ್ ​ನಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಇಲ್ಲಿ ಅನುತ್ತೀರ್ಣರಾದವರಿಗೆ ಮೇನಲ್ಲಿ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗುವುದು. ಆಗಲೂ ಅವರು ಅನುತ್ತೀರ್ಣರಾದರೆ  ಅಂಥವರನ್ನು ಅದೇ ತರಗತಿಯಲ್ಲಿ ಮತ್ತೊಂದು ವರ್ಷ ಉಳಿಸಲಾಗುತ್ತದೆ.
 
 ಅನುತ್ತೀರ್ಣಗೊಳಿಸಿದರೆ ಮಕ್ಕಳು ಪ್ರೇರಣೆ ಕಳೆದುಕೊಳ್ಳುತ್ತಾರೆ. ಕೆಲವು ಸಂದರ್ಭದಲ್ಲಿ ಶಾಶ್ವತವಾಗಿ ಶಾಲೆಯನ್ನೇ ತೊರೆಯಬಹುದು ಎಂಬ ಕಾರಣಕ್ಕೆ  ಈ ಹಿಂದೆ ನಿರ್ಬಂಧ ರಹಿತ ನೀತಿ ಜಾರಿಗೆ ತರಲಾಗಿತ್ತು.
 

Share this Story:

Follow Webdunia kannada

ಮುಂದಿನ ಸುದ್ದಿ

ಅಯ್ಯೊ..ಏನ್ ಕಾಲ ಬಂತು ಒಂದು ಕಪ್ ಟೀಗೆ ಒಂದು ಸಿಗರೇಟ್ ಪ್ರೀ...