ಚಂಡೀಗಢ : ಹಿಂದಿನ ಸರ್ಕಾರಗಳು ರಾಜ್ಯವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿದ್ದು,
ಇದೀಗ ಆಮ್ ಆದ್ಮಿ ಪಕ್ಷ ಸರ್ಕಾರವು ಹಣವನ್ನು ಎಲ್ಲಿ ಬಳಸಲಾಗಿದೆ ಎಂದು ವಿಚಾರಣೆ ನಡೆಸಿ ವಸೂಲಿ ಮಾಡುತ್ತೇವೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ.
ಹಿಂದಿನ ಸರ್ಕಾರಗಳು ಪಂಜಾಬ್ ಮೇಲೆ 3 ಲಕ್ಷ ಕೋಟಿ ಸಾಲವನ್ನು ಹೊರಿಸಿದೆ. ಆದರೆ ಹಣವನ್ನು ಎಲ್ಲಿ ಬಳಸಲಾಗಿದೆ ಎಂದು ನಾವು ತನಿಖೆ ನಡೆಸುತ್ತೇವೆ ಮತ್ತು ವಸೂಲಿ ಮಾಡುತ್ತೇವೆ. ಏಕೆಂದರೆ ಅದು ಜನರ ಹಣ ಎಂದು ಮುಖ್ಯಮಂತ್ರಿ ಅವರನ್ನು ಉಲ್ಲೇಖಿಸಿ ಪಕ್ಷದ ರಾಜ್ಯ ಘಟಕ ಪಂಜಾಬಿಯಲ್ಲಿ ಟ್ವೀಟ್ ಮಾಡಿದೆ.
ವಿಧಾನಸಭೆ ಚುನಾವಣೆಗೂ ಮುನ್ನ ಪಂಜಾಬ್ನ ಆಗಿನ ಕಾಂಗ್ರೆಸ್ ಸರ್ಕಾರವು ರಾಜ್ಯವನ್ನು ಸಾಲದ ಸುಳಿಗೆ ತಳ್ಳುತ್ತಿದೆ ಎಂದು ಎಎಪಿಯ ಹಿರಿಯ ನಾಯಕ ರಾಘವ್ ಚಡ್ಡಾ ಅವರು ಆರೋಪಿಸಿದ್ದರು.
ಪಂಜಾಬ್ನಲ್ಲಿ ಹುಟ್ಟುವ ಪ್ರತಿ ಮಗುವಿನ ತಲೆಯ ಮೇಲೆ 1 ಲಕ್ಷ ಸಾಲವಿದೆ. ಕಾಂಗ್ರೆಸ್ ಮತ್ತು ಬಾದಲ್ ಸರ್ಕಾರಗಳು ಕಳೆದ 50 ವರ್ಷಗಳಲ್ಲಿ ಪಂಜಾಬ್ ಅನ್ನು 3 ಲಕ್ಷ ಕೋಟಿ ಸಾಲಗಾರರನ್ನಾಗಿ ಮಾಡಿದೆ.
ಮೂರು ಕೋಟಿ ಜನಸಂಖ್ಯೆಯೊಂದಿಗೆ, ಇಂದು ಪಂಜಾಬ್ನಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ 1 ಲಕ್ಷ ಸಾಲವನ್ನು ಹೊಂದಿದ್ದಾನೆ ಎಂದು ತಿಳಿಸಿದ್ದರು.