ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆಯನ್ನ ಆಚರಿಸಲಾಗುತ್ತಿದೆ. ಪ್ರಸಿದ್ಧ ಸರ್ಚ್ ಎಂಜಿನ್ ಗೂಗಲ್`ನಲ್ಲೂ ಸಹ ವಿಶಿಷ್ಟ ಕಲಾತ್ಮಕ ಡೂಡಲ್ ಮೂಲಕ ಸಂಭ್ರಮಾಚರಣೆ ಮಾಡಲಾಗುತ್ತಿದೆ.
ಈ ವಿಶಿಷ್ಟ ಕಲಾತ್ಮಕ ಡೂಡಲ್`ನಲ್ಲಿ ರಂಗಿನ ಭಾರತದ ಸಂಸತ್ ಭವನದ ಮೇಲೆ ಅಶೋಕ ಚಕ್ರದ ಜೊತೆಗೆ ರಾಷ್ಟ್ರೀಯ ಪಕ್ಷಿ ನವಿಲು, ರಾಷ್ಟ್ರಧ್ವಜದ ಕೇಸರಿ, ಬಿಳಿ, ಹಸಿರು ಬಣ್ಣಗಳು ರಾರಾಜಿಸುತ್ತಿವೆ.
ಗೂಗಲ್ ಎಂಬ ಪದವನ್ನ ಸಂಸತ್ ಕಲಾಕೃತಿಯ ಮೇಲೆ ಚಿತ್ರಿಸಲಾಗಿದ್ದು, ತ್ರಿವರ್ಣಗಳನ್ನ ಒಳಗೊಂಡಿದೆ. ವಿಶಿಷ್ಟ ಪೇಪರ್ ಕಟ್ಟ ಕಲಾಶೈಲಿಯನ್ನ ಇದಕ್ಕೆ ಬಳಸಲಾಗಿದೆ. ಮುಂಬೈ ಮೂಲದ ಕಲಾವಿದೆ ಸಬೀನಾ ಕಾರ್ಣಿಕ್ ಈ ವಿಶಿಷ್ಟ ಡೂಡಲ್ ಅನ್ನ ತಯಾರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!