ಇಂದೋರ್ : 2040 ರ ವೇಳೆಗೆ ಭಾರತ ದೇಶದಲ್ಲಿ ತಲಾ ವಿದ್ಯುತ್ ಬಳಕೆ ದ್ವಿಗುಣಗೊಳ್ಳಲಿದ್ದು, ಹೆಚ್ಚಿನ ಕಲ್ಲಿದ್ದಲು ಉತ್ಪಾದನೆಗೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿರುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಕಲ್ಲಿದ್ದಲು ಗಣಿಗಾರಿಕೆ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಕಲ್ಲಿದ್ದಲು ಸಚಿವಾಲಯ ಇಂದೋರ್ನಲ್ಲಿ ಇಂದು ಮೊಟ್ಟಮೊದಲ ಹೂಡಿಕೆದಾರರ ಸಮಾವೇಶವನ್ನು ಹಮ್ಮಿಕೊಂಡಿತ್ತು.
ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ, ಕೇಂದ್ರ ಸರಕಾರ ಕಲ್ಲಿದ್ದಲು ಕ್ಷೇತ್ರವನ್ನ ಖಾಸಗಿ ವಲಯಕ್ಕೂ ಅನ್ ಲಾಕ್ ಮಾಡುವ ಮೂಲಕ ಹೆಚ್ಚಿನ ಉತ್ಪಾದನೆಗೆ ಗಮನಹರಿಸಿದೆ ಎಂದರು. ಕಲ್ಲಿದ್ದಲು ಆಮದನ್ನ ಶೇ. 2ಕ್ಕೆ ಇಳಿಸಲಾಗಿದೆ ಎಂದರು.