Select Your Language

Notifications

webdunia
webdunia
webdunia
webdunia

ವಾಹನ ಖರೀದಿಸುವವರಿಗೆ ಗುಡ್ ನ್ಯೂಸ್

webdunia
ನವದೆಹಲಿ , ಶನಿವಾರ, 28 ಆಗಸ್ಟ್ 2021 (12:50 IST)
ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಇಂದು ಹೊಸ ವಾಹನಗಳಿಗೆ ಹೊಸ ನೋಂದಣಿ ಗುರುತು ಪರಿಚಯಿಸಿದೆ. ಭಾರತ್ ಸರಣಿ (ಬಿಹೆಚ್-ಸರಣಿ) ಇದಾಗಿದ್ದು, ಮಾಲೀಕರು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸ್ಥಳಾಂತರಗೊಂಡಾಗ ಬಿಹೆಚ್ ಗುರುತು ಹೊಂದಿರುವ ವಾಹನಕ್ಕೆ ಹೊಸ ನೋಂದಣಿ ಗುರುತು ಅಗತ್ಯವಿಲ್ಲ. ಈ ಸೌಲಭ್ಯವು ರಕ್ಷಣಾ ಸಿಬ್ಬಂದಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಉದ್ಯೋಗಿಗಳಿಗೆ ಸ್ವಯಂಪ್ರೇರಿತ ಆಧಾರದ ಮೇಲೆ ಲಭ್ಯವಿರುತ್ತದೆ.

ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಿಗಳಿಗೆ ವಾಹನ ಸ್ಥಳಾಂತರ ಸಂದರ್ಭದಲ್ಲಿ ಮೋಟಾರ್ ವಾಹನ ಕಾಯ್ದೆ, 1988 ರ ಸೆಕ್ಷನ್ 47 ರ ಅಡಿಯಲ್ಲಿ ಹೆಚ್ಚು ಕಾಲ ಇರಿಸಿಕೊಳ್ಳಲು ಅವಕಾಶವಿರುವುದರಿಂದ, ಇಂತಹ ಸಂದರ್ಭದಲ್ಲಿ ಮೂಲ ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ನೋಂದಣಿ ವರ್ಗಾವಣೆಗೆ ಸಂಬಂಧಿಸಿದಂತೆ ತೊಂದರೆಯಾಗುತ್ತದೆ.
ವಾಹನವನ್ನು ನೋಂದಾಯಿಸಿದ ರಾಜ್ಯವನ್ನು ಹೊರತುಪಡಿಸಿ ಬೇರೆ ಯಾವುದೇ ರಾಜ್ಯದಲ್ಲಿ 12 ತಿಂಗಳುಗಳಿಗಿಂತ ಹೆಚ್ಚಿನ ಸಮಯ ಹೊಸ ರಾಜ್ಯ ನೋಂದಣಿ ಪ್ರಾಧಿಕಾರದೊಂದಿಗೆ ಹೊಸ ನೋಂದಣಿಯನ್ನು 12 ತಿಂಗಳ ನಿಗದಿತ ಸಮಯದಲ್ಲಿ ಮಾಡಬೇಕು ಎಂದು ಸಚಿವಾಲಯ ಹೇಳಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ದೇಶದ 40 ಕೋಟಿ ಜನ ಇನ್ನೂ ದುರ್ಬಲರು, ಕೊರೋನಾ ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚು