ಪಂಜಾಬ್: ರಾಜ್ಯದ ಕೊರೋನಾ ಹರಡುವಿಕೆ 0.4 ಕ್ಕೆ ಇಳಿದ ತಕ್ಷಣ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ವಾರಾಂತ್ಯ ಕರ್ಫ್ಯೂ ಮತ್ತು ನೈಟ್ ಕರ್ಫ್ಯೂ ತೆಗೆಯಲಾಗುವುದು ಎಂದು ಆದೇಶ ಹೊಡರಿಸಿದ್ದಾರೆ. ಅಲ್ಲದೇ ಒಳಾಂಗಣದಲ್ಲಿ 100 ಜನ ಹಾಗೂ ಹೊರಾಂಗಣದ ಕಾರ್ಯಕ್ರಮಗಳಿಗೆ 200 ಜನರು ಸೇರಲು ಅವಕಾಶ ಮಾಡಿಕೊಡಲಾಗಿದೆ.
ಕೋವಿಡ್ ಕುರಿತಾದ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಡಿಜಿಪಿ ದಿನಕರ್ ಗುಪ್ತಾ ಅವರಿಗೆ ಒಂದಷ್ಟು ಸೂಚನೆಗಳನ್ನು ನೀಡಿದರು. ಇಡೀ ರಾಜ್ಯದಲ್ಲಿ ಇತರೇ ಪಕ್ಷಗಳ ನಾಯಕರುಗಳಿಂದ ರ್ಯಾಲಿ, ಸೇರಿದಂತೆ ಇತರೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಕುರಿತು ಏನು ಕ್ರಮ ತೆಗೆದುಕೊಳ್ಳಬಹುದು ಎನ್ನುವ ಕುರಿತು ಮುಂದಿನ ಜುಲೈ 20 ರಂದು ನಡೆಯುವ ಸಭೆಯಲ್ಲಿ ತಿಳಿಸಬೇಕು ಎಂದು ಆದೇಶಿಸಿದರು.ಪಂಜಾಬಿನಲ್ಲಿ ಯಾವುದಕ್ಕೆ ಅವಕಾಶವಿದೆ, ಯಾವುದಕ್ಕೆ ಇಲ್ಲ ಇಲ್ಲಿದೆ ಪಟ್ಟಿ