Webdunia - Bharat's app for daily news and videos

Install App

ಬೇಸತ್ತು ಹೋದೆ: ಕ್ಯಾನ್ಸರ್‌ ರೋಗಿ ಅಜ್ಜಿಯನ್ನು ಬೀದಿಯಲ್ಲಿ ಬಿಡಲು ಕಾರಣ ಕೊಟ್ಟ ಮೊಮ್ಮಗ

Sampriya
ಗುರುವಾರ, 26 ಜೂನ್ 2025 (18:41 IST)
ಮುಂಬೈ: ಚರ್ಮದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅಜ್ಜಿಯನ್ನು ಕಸದ ರಾಶಿ ಬಳಿ ಎಸೆದು ಹೋದ ಪ್ರಕರಣ ಸಂಬಂಧ ಮೊಮ್ಮಗ, ಆತನ ಸೋದರ ಮಾವ ಹಾಗೂ ಆಟೋರಿಕ್ಷಾ ಚಾಲಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. 

ಬಂಧಿತರನ್ನು ಆಕೆಯ ಮೊಮ್ಮಗ ರಾಹುಲ್ ಶೆವಾಲೆ, ಆತನ ಸೋದರ ಮಾವ ಬಾಬಾಸಾಹೇಬ್ ಗಾಯಕ್ವಾಡ್ ಮತ್ತು ಆಟೋರಿಕ್ಷಾ ಚಾಲಕ ಸಂಜಯ್ ಕದ್ರೇಸಿಂ ಎಂದು ಗುರುತಿಸಲಾಗಿದೆ.

ವಿಚಾರಣೆ ವೇಳೆ ಆಕೆಯ ಆರೈಕೆಯನ್ನು ಮಾಡಿ ಬೇಸತ್ತು ಹೋದೆ. ಹಾಗಾಗಿ ಆಕೆಯನ್ನು ಅಲ್ಲಿ ಬಿಟ್ಟುಬಂದೆ ಎಂದು ಹೇಳಿದ್ದಾರೆ.  

ಪ್ರಮುಖ ಆರೋಪಿ ರಾಹುಲ್ ಶೆವಾಲೆ ಎಂದು ಗುರುತಿಸಲಾಗಿದ್ದು, ಜೂನ್ 22 ರಂದು ಆರೆಯ ಅರಣ್ಯ ಪ್ರದೇಶದಲ್ಲಿ ಚರ್ಮದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಜ್ಜಿ ಯಶೋದಾ ಗಾಯಕ್‌ವಾಡ್ ಅವರನ್ನು ಕಸದ ರಾಶಿ ಬಳಿ ಮೊಮ್ಮಗ, ಆತನ ಸೋದರ ಮಾವ ಹಾಗೂ ಆಟೋ ರಿಕ್ಷಾ ಡ್ರೈವರ್ ಬಿಟ್ಟು ಹೋಗಿದ್ದರು. ಮಹಿಳೆ ಗಾಯಗೊಂಡು ಕಸದ ರಾಶಿಯಲ್ಲಿ ಬಿದ್ದಿರುವುದು ಕಂಡುಬಂದಿದೆ

ಅಲ್ಸರೇಟಿವ್ ಚರ್ಮದ ಕ್ಯಾನ್ಸರ್‌ನಿಂದ ಬಳಲುತ್ತಿರುವ ವೃದ್ಧೆಯನ್ನು ಮೊದಲು ಜೋಗೇಶ್ವರಿ ಟ್ರಾಮಾ ಕೇರ್ ಆಸ್ಪತ್ರೆಗೆ ಸಾಗಿಸಲಾಯಿತು ಮತ್ತು ನಂತರ ಕೂಪರ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ಅವರು ಪ್ರಸ್ತುತ ಚಿಕಿತ್ಸೆಯಲ್ಲಿದ್ದಾರೆ<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಪಕ್ಷ ನಾಯಕನ ಬದಲಾವಣೆ: ಸತ್ಯಾಂಶವಿಲ್ಲ ಎಂದ ಬಿವೈ ವಿಜಯೇಂದ್ರ

ಗುಡ್ಡಕುಸಿತ: ಶಿರಾಡಿ ಘಾಟ್ ಬಂದ್, ಬೆಂಗಳೂರು– ಮಂಗಳೂರು ಸಂಪರ್ಕ ಕಡಿತ

ದ್ವಿಚಕ್ರ ವಾಹನಕ್ಕೆ ಟೋಲ್ ವದಂತಿ: ಸ್ಪಷ್ಟನೆ ಕೊಟ್ಟ ನಿತಿನ್ ಗಡ್ಕರಿ

ಶುಭಾಂಶು ಶುಕ್ಲಾ ಹೊರಟಿದ್ದ ಸ್ಪೇಸ್ ಎಕ್ಸ್ ಡ್ರ್ಯಾಗನ್ ನೌಕೆ ಯಶಸ್ವೀ ಡಾಕಿಂಗ್

ಕೃತಕ ಫುಡ್‌ ಕಲರ್‌ ಬೆನ್ನಲ್ಲೇ ಕೆಲ ಔಷಧಗಳು, ಸೌಂದರ್ಯವರ್ಧಕಗಳ ಬಳಕೆಗೆ ನಿಷೇಧ ಹೇರಿದ ರಾಜ್ಯ ಸರ್ಕಾರ

ಮುಂದಿನ ಸುದ್ದಿ
Show comments