Select Your Language

Notifications

webdunia
webdunia
webdunia
webdunia

ಅತ್ಯಾಚಾರ ಆರೋಪ: ಶರಣಾದ ಗೋವಾ ಶಾಸಕ

Goa MLA
ಪಣಜಿ , ಗುರುವಾರ, 5 ಮೇ 2016 (18:35 IST)
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪವನ್ನು ಎದುರಿಸುತ್ತಿರುವ ಗೋವಾದ ಮಾಜಿ ಶಿಕ್ಷಣ ಮಂತ್ರಿ ಅತಾನಾಯಸಿಯೋ ಮಾನ್ಸರಾಟ್ ಅಲಿಯಾಸ್ ಬಾಬುಷ್ ಮಾನ್ಸರಾಟ್ ಇಂದು ಪೊಲೀಸರಿಗೆ ಶರಣಾಗಿದ್ದಾರೆ. 
 
ಕ್ರೈ ಬ್ರಾಂಚ್ ಪೊಲೀಸರಿಗೆ ಶರಣಾಗುವ ಮೊದಲು ಪಣಜಿಯ ಹೊರವಲಯದಲ್ಲಿ ವರದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ನಾನೇನು ತಪ್ಪು ಮಾಡಿಲ್ಲ. ಹೀಗಾಗಿ ನನಗೆ ಭಯವಾಗುತ್ತಿಲ್ಲ, ನನ್ನ ವಿರುದ್ಧ ಪಿತೂರಿ ನಡೆದಿದೆ ಎಂದು ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಪತ್ನಿ, ಕಾಂಗ್ರೆಸ್ ಶಾಸಕಿ ಜೆನಿಫರ್ ಅವರ ಜತೆಯಲ್ಲಿದ್ದರು.
 
ಕಳೆದ ಕೆಲ ದಿನಗಳ ಹಿಂದೆ ಶಾಸಕ ನೇಪಾಳದ ಅಪ್ರಾಪ್ತ ಬಾಲಕಿಯನ್ನು 4,000 ರೂಪಾಯಿಗೆ ಖರೀದಿಸಿ ಕರೆ ತಂದು ಮನೆಗೆಲಸದಳಾಗಿ ನೇಮಿಸಿಕೊಂಡಿದ್ದರು. ಮಾರ್ಚ್ ತಿಂಗಳಲ್ಲಿ ಅವರು ಪಾನೀಯಕ್ಕೆ ಮದ್ದನ್ನು ಬೆರೆಸಿ ಬಾಲಕಿಗೆ ಕುಡಿಸಿ ಜ್ಞಾನತಪ್ಪಿದ ಮೇಲೆ ಅತ್ಯಾಚಾರ ಮಾಡಿದ್ದಾರೆಂದು ದೂರು ದಾಖಲಾಗಿದೆ.
 
ಬೆಳಿಗ್ಗೆ ಎಚ್ಚರವಾದಾಗ ಮೈಮೇಲೆ ಬಟ್ಟೆ ಇರಲಿಲ್ಲ. ಸುತ್ತಲೂ ರಕ್ತ ಚೆಲ್ಲಾಡಿತ್ತು. ಅವರು ಕೂಡ ಮೈಮೇಲೆ ಯಾವುದೇ ಬಟ್ಟೆಯಿಲ್ಲದೇ ನಗ್ನರಾಗಿದ್ದರು ಎಂದು ಬಾಲಕಿ ಮಕ್ಕಳ ರಕ್ಷಣಾ ಸಮಿತಿಗೆ ಹೇಳಿಕೆ ನೀಡಿದ್ದಾಳೆ.
 
ಮಾರ್ಚ್ ತಿಂಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಆಕೆಯ ಮೇಲೆ ಅತ್ಯಾಚಾರವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಾಬುಷ್ ವಿರುದ್ಧ ಐಪಿಸಿ ಸೆಕ್ಷನ್ 375ರ ಪ್ರಕಾರ ಎಫ್​ಐಆರ್ ದಾಖಲಾಗಿದೆ.
 
ಬಾಬುಷ್ ಮಗ ರೋಹಿತ್ ಕೂಡ 5 ವರ್ಷಗಳ ಹಿಂದೆ ಅಪ್ರಾಪ್ತ ಜರ್ಮನ್ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ಬಂಧಿತನಾಗಿದ್ದ. ನಂತರ ದೋಷಮುಕ್ತನಾಗಿ ಬಿಡುಗಡೆಯಾಗಿದ್ದ.

Share this Story:

Follow Webdunia kannada

ಮುಂದಿನ ಸುದ್ದಿ

ರೇಪ್ ಬಲಿಪಶು ಕುಟುಂಬವನ್ನು ಭೇಟಿ ಮಾಡಲಿರುವ ಪ್ರಧಾನಿ