Select Your Language

Notifications

webdunia
webdunia
webdunia
webdunia

ರೇಪ್ ಬಲಿಪಶು ಕುಟುಂಬವನ್ನು ಭೇಟಿ ಮಾಡಲಿರುವ ಪ್ರಧಾನಿ

ರೇಪ್ ಬಲಿಪಶು ಕುಟುಂಬವನ್ನು ಭೇಟಿ ಮಾಡಲಿರುವ ಪ್ರಧಾನಿ
ನವದೆಹಲಿ , ಗುರುವಾರ, 5 ಮೇ 2016 (18:15 IST)
ಕೇರಳದ ಪೆರಂಬವೂರ್‌ನಲ್ಲಿ ಅಮಾನುಷವಾಗಿ ಅತ್ಯಾಚಾರಕ್ಕೊಳಗಾಗಿ ಹತ್ಯೆಗೈಯ್ಯಲ್ಪಟ್ಟ ಯುವತಿಯ ಕುಟುಂಬವನ್ನು ಪ್ರಧಾನಿ ಮೋದಿ ಮೇ 11 ರಂದು ಭೇಟಿ ಮಾಡಲಿದ್ದಾರೆ.
 
ಸಾಮಾಜಿಕ ನ್ಯಾಯ ಖಾತೆ ಸಚಿವ ಥಾವರ್ ಗೆಹ್ಲೋಟ್ ಸಹ ಬಲಿಪಶುವಿನ ಕುಟುಂಬವನ್ನು ಭೇಟಿ ಮಾಡಲಿದ್ದರೆ ಎಂದು ತಿಳಿದು ಬಂದಿದೆ. 
 
ಕೇರಳದಲ್ಲಿ ವಿಧಾನಸಭಾ ಚುನಾವಣೆಗೆ ಕೇವಲ 12 ದಿನಗಳು ಬಾಕಿ ಇದ್ದು ಈ ಬರ್ಬರ ಅತ್ಯಾಚಾರ, ಕೊಲೆ ಪ್ರಕರಣ ಹೆಚ್ಚು ಚರ್ಚೆಗೊಳಪಡುತ್ತಿರುವ ವಿಷಯವಾಗಿ ಮಾರ್ಪಟ್ಟಿದೆ. 
 
ಎಪ್ರಿಲ್ 28 ರಂದು ನಡೆದ ಈ ಹತ್ಯೆಯನ್ನು 2012ರ ಡಿಸೆಂಬರ್ ತಿಂಗಳಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರಕ್ಕೆ ಹೋಲಿಸಲಾಗುತ್ತಿದ್ದು ಯುವತಿಯ ಕುತ್ತಿಗೆ, ಎದೆ ಮತ್ತು ಅನೇಕ ಕಡೆಗಳಲ್ಲಿ 13 ಗಾಯದ ಗುರುತುಗಳು ಮತ್ತು ಕುತ್ತಿಗೆ ಹಿಸುಕಿದ ಗುರುತುಗಳಿವೆ ಎಂದು ಎರ್ನಾಕುಲಮ್ ವಿಭಾಗ ಐಜಿ ಮಹಿಪಾಲ್ ಯಾದವ್ ತಿಳಿಸಿದ್ದಾರೆ. ಆದರೆ ಕೆಲವು ವರದಿಗಳ ಪ್ರಕಾರ ಆಕೆಯ ದೇಹದಲ್ಲಿ 30 ಗಾಯದ ಗುರುತುಗಳಿವೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಕಡಿಮೆ ದರದ ಇಂಟೆಕ್ಸ್ ಆಕ್ವಾ ಜಾಯ್ ಸ್ಮಾರ್ಟ್‌ಪೋನ್‌ಗಳು ಮಾರುಕಟ್ಟೆಗೆ